ಮನೆ ಮನೆಗೆ ಕಾಂಗ್ರೆಸ್ ವಿಫಲವಾಗಿದ್ದಕ್ಕೆ ಹೈಕಮಾಂಡ್ ಗರಂ ಆಗಿದೆ. ಅದರಲ್ಲೂ ಬೆಂಗಳೂರು ಶಾಸಕರು ನಿದ್ರಾವಸ್ಥೆಯಿಂದ ಎದ್ದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಮತ್ತು ರಾಜಧಾನಿ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಎಂದು ಉಸ್ತುವಾರಿ ವೇಣುಗೋಪಾಲ ಬೆಂಗಳೂರು ಶಾಸಕರ ಚಳಿ ಬಿಡಿಸಿದ್ದಾರೆ.
ಬೆಂಗಳೂರು (ಅ.06): ಮನೆ ಮನೆಗೆ ಕಾಂಗ್ರೆಸ್ ವಿಫಲವಾಗಿದ್ದಕ್ಕೆ ಹೈಕಮಾಂಡ್ ಗರಂ ಆಗಿದೆ. ಅದರಲ್ಲೂ ಬೆಂಗಳೂರು ಶಾಸಕರು ನಿದ್ರಾವಸ್ಥೆಯಿಂದ ಎದ್ದು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಮತ್ತು ರಾಜಧಾನಿ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಎಂದು ಉಸ್ತುವಾರಿ ವೇಣುಗೋಪಾಲ ಬೆಂಗಳೂರು ಶಾಸಕರ ಚಳಿ ಬಿಡಿಸಿದ್ದಾರೆ.
ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ ಬೆಂಗಳೂರು ಕಾಂಗ್ರೆಸ್ ಶಾಸಕರ ಸಭೆ ನಡೆಸಿದರು. ಕೆಪಿಸಿಸಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಕೂಡ ಭಾಗಹಿಸಿದ್ದರು. ಪಕ್ಷದ ವಿನೂತನ ಕಾರ್ಯಕ್ರಮ ಮನೆ ಮನೆಗೆ ಕಾಂಗ್ರೆಸ್ ಬೆಂಗಳೂರಲ್ಲಿ ಸಂಪೂರ್ಣ ವಿಫಲವಾಗಿದ್ದಕ್ಕೆ ನಾಯಕರು, ನಗರ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಳ್ಳಿ. ಜನರ ಮನೆಗೆ ತೆರಳಿ ಪಕ್ಷ ಮತ್ತು ಸರ್ಕಾರದ ಬಗ್ಗೆ ಹೇಳಿ. ಕಾರ್ಯಕರ್ತರಲ್ಲಿ ಹುರುಪು ತುಂಬಿ ಅಂತಾ ವೇಣುಗೋಪಾಲ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಶಾಸಕರು ಸಕ್ರಿಯವಾಗದಿರುವುದು ವೇಣುಗೀಪಾಲ್ಗೆ ಅಚ್ಚರಿ ತಂದಿದೆ. ಏನಾಗಿದೆ ನಮ್ಮ ಶಾಸಕರಿಗೆ, ಜಗತ್ತು ಎತ್ತ ಸಾಗುತ್ತಿದೆ? ನೀವೆಲ್ಲಿದ್ದೀರಿ? ಅಂತ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆ ಮನೆಗೆ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಈ ತಿಂಗಳಲ್ಲಿ ಮುಕ್ತಾಯವಾಗಬೇಕು. ಜೊತೆಗೆ ಬೆಂಗಳೂರಿನ ಜನತೆ ಅಪಾರ ಮಳೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಅವರ ಬಳಿ ತೆರಳಿ ಸಮಸ್ಯೆ ಆಲಿಸಿ. ನಗರದ ಸಮಸ್ಯೆ ಕೇವಲ ಬಿಬಿಎಂಪಿ ಸದಸ್ಯರದ್ದೇ ಮಾತ್ರ ಅಲ್ಲ. ನೀವು ಕೂಡ ಜವಾಬ್ದಾರರಾಗಿದ್ದೀರಿ. ಈ ಬಗ್ಗೆ ಎಚ್ಚರ ಇರಲಿ ಅಂತಾ ಶಾಸಕರಿಗೆ ಮುಖಂಡರು ತಾಜೀತು ಮಾಡಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಚುನಾವಣೆಗೆ ಭರ್ಜರಿಯಾಗೇ ತಯಾರಾಗ್ತಿದೆ. ಆದರೆ ನಾಯಕರ ಸ್ಪಂದನೆ ಮಾತ್ರ ಅಷ್ಟಕ್ಕಷ್ಟೆಯಾಗಿದೆ.
