ಬಿಜೆಪಿಯಲ್ಲಿ ಅಮಿತ್​ ಶಾ ಆಯ್ತು ಈಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ  ವೇಣುಗೋಪಾಲ್  ಕಾಂಗ್ರೆಸ್ ಯುವ ಘಟಕದ ಮುಖಂಡರ ಜೊತೆ ಸಭೆ  ನಡೆಸಿದ್ದಾರೆ.

ಬೆಂಗಳೂರು (ಡಿ.05): ಬಿಜೆಪಿಯಲ್ಲಿ ಅಮಿತ್​ ಶಾ ಆಯ್ತು ಈಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕಾಂಗ್ರೆಸ್ ಯುವ ಘಟಕದ ಮುಖಂಡರ ಜೊತೆ ಸಭೆ ನಡೆಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಲ್ಲ ಘಟಕಗಳ ಮುಂಚೂಣಿ ನಾಯಕರ ಸಭೆ ನಡೆಸಿದ್ದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ ಗುಂಡೂರಾವ್, ಎಸ್ ಆರ್ ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸೇರಿ ಇತರೆ ಮುಖಂಡರು ಭಾಗಿಯಾಗಿದ್ದಾರೆ.

ಯುವ ಕಾಂಗ್ರೆಸ್ ಮುಖಂಡರಿಗೆ ಕೆ.ಸಿ. ವೇಣುಗೋಪಾಲ್ ಅಮಿತ್ ಶಾ ಮಾದರಿಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ​​ 'ರಾಜ್ಯವೇ ನಿಮ್ಮತ್ತ ನೋಡುವಂತ ಒಂದಾದರೂ ಹೋರಾಟ ಮಾಡಿದ್ದೀರಾ ? ಕಾಟಾಚಾರಕ್ಕೆ ಹತ್ತಾರು ಮಂದಿಯನ್ನು ಸೇರಿ ಹೋರಾಟ ಮಾಡೋದಲ್ಲ. ಪ್ರತಿಪಕ್ಷಗಳು ಬೆದರುವಂತೆ ಹೋರಾಟ ಯಾಕೆ ಮಾಡುತ್ತಿಲ್ಲ? ಚುನಾವಣೆ ಸಂದರ್ಭದಲ್ಲಿ ಪಕ್ಷ ಸಂಘಟ‌ನೆಯಲ್ಲಿ ಯುವ ಘಟಕದ ಕೊಡುಗೆ ಏನು ?ಎಂದು ಕಾಂಗ್ರೆಸ್ ಯುವ ಘಟಕದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.