ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳ ಕಾಲ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳ ಸರಣಿ ಸಭೆ ನಡೆಸಿದ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 35 ಜಿಲ್ಲಾ ಕಾಂಗ್ರೆಸ್‌ ಸಮಿತಿಗಳು ಅಸ್ತಿತ್ವದಲ್ಲಿದ್ದು, ಈ ಪೈಕಿ ಏಳು ಜಿಲ್ಲೆಗಳನ್ನು ಅತ್ಯಂತ ಸಮಸ್ಯಾತ್ಮಕ ಜಿಲ್ಲೆಗಳು ಎಂದು ಗುರುತಿಸಲಾಗಿದೆ.
ಬೆಂಗಳೂರು: ಜಿಲ್ಲಾ ಮಟ್ಟದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಅತ್ಯಂತ ಸಮಸ್ಯಾತ್ಮಕ ಏಳು ಜಿಲ್ಲೆಗಳಲ್ಲಿ (ಕಾಂಗ್ರೆಸ್ ಸಂಘಟನಾ ಜಿಲ್ಲೆಗಳು) ಸಮನ್ವಯ ಸಮಿತಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಆಣತಿ ಮೇರೆಗೆ ಕೆಪಿಸಿಸಿ ರಚಿಸಿದೆ. ಈ ಸಮಿತಿಗಳು ಅಂತರಿಕ ಭಿನ್ನಾಭಿಪ್ರಾಯ ಬಗೆಹರಿಸುವ ಹಾಗೂ ಜಿಲ್ಲೆಯ ಮಟ್ಟದಲ್ಲಿ ಪಕ್ಷ ಸಂಘಟನೆ ಬಲ ಹೆಚ್ಚಿಸುವ ಕುರಿತು ಸ್ಥಳೀಯ ನಾಯಕರೊಂದಿಗೆ ಸಭೆ ಸೇರಿ ಪ್ರತಿ ತಿಂಗಳು ನೇರವಾಗಿ ಹೈಕಮಾಂಡ್'ಗೆ ವರದಿ ನೀಡಲಿವೆ.
ಜಿಲ್ಲಾ ಮಟ್ಟದಲ್ಲಿರುವ ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಅತ್ಯಂತ ಸಮಸ್ಯಾತ್ಮಕ ಏಳು ಜಿಲ್ಲೆಗಳಲ್ಲಿ (ಕಾಂಗ್ರೆಸ್ ಸಂಘಟನಾ ಜಿಲ್ಲೆಗಳು) ಸಮನ್ವಯ ಸಮಿತಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಆಣತಿ ಮೇರೆಗೆ ಕೆಪಿಸಿಸಿ ರಚಿಸಿದೆ. ಈ ಸಮಿತಿಗಳು ಅಂತರಿಕ ಭಿನ್ನಾಭಿಪ್ರಾಯ ಬಗೆಹರಿಸುವ ಹಾಗೂ ಜಿಲ್ಲೆಯ ಮಟ್ಟದಲ್ಲಿ ಪಕ್ಷ ಸಂಘಟನೆ ಬಲ ಹೆಚ್ಚಿಸುವ ಕುರಿತು ಸ್ಥಳೀಯ ನಾಯಕರೊಂದಿಗೆ ಸಭೆ ಸೇರಿ ಪ್ರತಿ ತಿಂಗಳು ನೇರವಾಗಿ ಹೈಕಮಾಂಡ್ಗೆ ವರದಿ ನೀಡಲಿವೆ.
ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳ ಕಾಲ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸರಣಿ ಸಭೆ ನಡೆಸಿದ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 35 ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಅಸ್ತಿತ್ವದಲ್ಲಿದ್ದು, ಈ ಪೈಕಿ ಏಳು ಜಿಲ್ಲೆಗಳನ್ನು ಅತ್ಯಂತ ಸಮಸ್ಯಾತ್ಮಕ ಜಿಲ್ಲೆಗಳು ಎಂದು ಗುರುತಿಸಲಾಗಿದೆ.
ಈ ಜಿಲ್ಲೆಗಳಿಗೆ ತಲಾ ಒಂದೊಂದು ಸಮನ್ವಯ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕೆಪಿಸಿಸಿಯ ಪ್ರತಿನಿಧಿ ಹಾಗೂ ಸ್ಥಳೀಯ ಮುಖಂಡರು ಇರುತ್ತಾರೆ. ಈ ಸಮಿತಿಯು ಭಿನ್ನಾಭಿಪ್ರಾಯ ಬಗೆಹರಿಸುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ, ಅದರ ವರದಿಯನ್ನು ನೇರವಾಗಿ ಹೈಕಮಾಂಡ್'ಗೆ ನೀಡಲಿದೆ.
ಯಾವುವು ಆ 7 ಜಿಲ್ಲೆಗಳು?:
1) ಬೆಳಗಾವಿ ನಗರ
2) ಬೆಳಗಾವಿ ಗ್ರಾಮಾಂತರ
3) ಹುಬ್ಬಳ್ಳಿ ಧಾರವಾಡ ನಗರ
4) ಹುಬ್ಬಳ್ಳಿ ಧಾರವಾಡ ಗ್ರಾಮಾಂತರ
5) ರಾಯಚೂರು
6) ಹಾಸನ
7) ತುಮಕೂರು
ಬಿಜೆಪಿಗೆ ಸವಾಲು:
ರಾಜ್ಯದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಯಾವುದೇ ರಾಜ್ಯಕ್ಕಿಂತ ಉತ್ತಮ ಸಾಧನೆ ಮಾಡಿದೆ. ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲು ನಾವು ಸಿದ್ಧ ಎಂದು ವೇಣುಗೋಪಾಲ್ ಅವರು ಬಿಜೆಪಿಗೆ ಸವಾಲು ಹಾಕಿದರು. ಹಿಂದುಳಿದವರು, ದಲಿತರ ಬಗ್ಗೆ ಹೃದಯದಿಂದ ಕಾಳಜಿ ಹೊಂದಿರಬೇಕು. ಮೆದುಳಿನಿಂದಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಜಗಳ ಮರೆತು ಕೆಲಸ ಮಾಡಿ ಎಂದ ವೇಣು
ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಜಿಲ್ಲಾ ಘಟಕಗಳನ್ನು ಸಜ್ಜುಗೊಳಿಸುವ ಸಲುವಾಗಿ ಸತತ ನಾಲ್ಕನೇ ದಿನವೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಾಂಗ್ರೆಸ್ ಜಿಲ್ಲಾ ಮುಖಂಡರೊಂದಿಗೆ ಸಭೆ ನಡೆಸಿದ್ದು, ವೈಮನಸ್ಸು ಪಕ್ಕಕ್ಕಿಟ್ಟು ಪಕ್ಷ ಸಂಘಟನೆ ಚುರುಕುಗೊಳಿಸುವ ಮೂಲಕ ಚುನಾವಣೆಗೆ ಸಜ್ಜಾಗುವಂತೆ ಮುಖಂಡರಿಗೆ ಸಲಹೆ ನೀಡಿದ್ದಾರೆ.
ಮೊದಲ ಮೂರು ದಿನ ನಡೆದ ಸರಣಿ ಸಭೆಯಲ್ಲಿ ಬೆಳಗಾವಿ ಜಾರಕಿಹೊಳಿ ಸಹೋದರರು, ಬಳ್ಳಾರಿಯ ಲಾಡ್ ಸಹೋದರರ ಹುಳುಕು ಹೊರಬಿದ್ದರೆ, ಗುರುವಾರದ ಸರಣಿ ಸಭೆಯಲ್ಲಿ ತುಮಕೂರು, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗಗೊಂಡಿದೆ.
ಗುರುವಾರ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಜತೆಗೂಡಿ ಬೆಂಗಳೂರು ನಗರ, ಬೆಂಗಳೂರು ಮಹಾನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಸೇರಿ ಒಂಬತ್ತು ಜಿಲ್ಲೆಗಳ ಮುಖಂಡರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು.
ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವ ಅಧಿಕಾರ ಇಲ್ಲಿ (ರಾಜ್ಯ) ಯಾರಿಗೂ ಇಲ್ಲ. ಟಿಕೆಟ್ ನೀಡುವುದು ಹೈಕಮಾಂಡ್. ಜೆಡಿಎಸ್ನಿಂದ ಕಾಂಗ್ರೆಸ್ಗೆ ಬರಲಿದ್ದಾರೆ ಎನ್ನುತ್ತಿರುವ 7 ಮಂದಿ ಬಂಡಾಯ ಶಾಸಕರಿಗೆ ಮುಖ್ಯಮಂತ್ರಿಗಳು ಟಿಕೆಟ್ ಕೊಡಿಸುತ್ತಾರೆ ಎಂದರೆ ಅದನ್ನು ಅವರನ್ನೇ ಕೇಳ್ಕೊಳಿ.
- ಡಿ.ಕೆ. ಶಿವಕುಮಾರ್, ಸಚಿವ
