ಬೆಂಗಳೂರು, [ಜೂನ್.05]: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ಸ್ವತಃ ಕರ್ನಾಟಕ ಬಿಜೆಪಿ ಉಸ್ತುವಾರಿಗಳೇ ಅಖಾಡಕ್ಕಿಳಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿತ್ತು.  ಪ್ರಶ್ನೆ ಏಳಲು ಅದಕ್ಕೆ ಮುರಳಿಧರರಾವ್ ನೀಡಿದ ಹೇಳಿಕೆ ಮುಖ್ಯ ಕಾರಣವಾಗಿತ್ತು.

ಉಮೇಶ್ ಜಾಧವ್ ಉದಾಹರಣೆ ಕೊಟ್ಟು ಹೇಳಿಕೆ ನೀಡಿದ್ದ ಮುರಳಿಧರ ರಾವ್ ಪರೋಕ್ಷವಾಗಿ ಮೈತ್ರಿ ಸರ್ಕಾರವನ್ನು ಉರುಳಿಸಬೇಕು ಎನ್ನುವ ಅರ್ಥದಲ್ಲಿ ಮಾತನಾಡಿದ್ದರು ಎಂಬ ಸುದ್ದಿ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆ ಕಾಂಗ್ರೆಸ್ ಕೌಂಟರ್ ನೀಡಿದೆ.

ಗರಿಗೆದರಿದ ರಾಜಕೀಯ: ಬಿಜೆಪಿಗೆ ಬರುವಂತೆ ಕಾಂಗ್ರೆಸ್ ಶಾಸಕರಿಗೆ ಬಹಿರಂಗ ಆಹ್ವಾನ..!

ಬಹಿರಂಗವಾಗಿಯೇ ನೀವು ಮೈತ್ರಿ ಸರ್ಕಾರದ ಶಾಸಕರನ್ನು ಬಿಜೆಪಿಗೆ ಆಹ್ವಾನಿಸುತ್ತಿದ್ದೀರಿ. ನಿಮ್ಮ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ, ಆಪರೇಷನ್ ಕಮಲ ಕುದುರೆ ವ್ಯಾಪಾರವು ವಿಫಲ ಯತ್ನ ಎಂದು ಸಾಬೀತಾಗಿದೆ. ಹೀಗಿದ್ದರೂ ಆಪರೇಷನ್ ಕಮಲದ ದಲ್ಲಾಳಿಯಂತೆ ತಾವು ವರ್ತಿಸುತ್ತಿದ್ದೀರಿ ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.