ಒಂದು ಕಡೆ ಸಚಿವ ಸಂಪುಟ ವಿಸ್ತರಣೆ ವಿಚಾರ ಬಹು ಚರ್ಚಿತವಾಗಿದ್ದರೆ ಇನ್ನೊಂದು ಕಡೆ ನಾಯಕರ ನಡುವಿನ ಶೀತಲ ಸಮರ ಮತ್ತೆ ತಾರಕಕ್ಕೆ ಏರಿದಂತೆ ಕಾಣುತ್ತಿದೆ.

ಬೆಳಗಾವಿ[ಡಿ.20] ಲಕ್ಷ್ಮಿ ಹೆಬ್ಬಾಳ್ಕರ್- ರಮೇಶ್ ಜಾರಕಿಹೊಳಿ ನಡುವೆ ಶೀತಲ ಸಮರ ದೆಹಲಿ ಅಂಗಳ ತಲುಪಿದೆ. ಇಬ್ಬರ ನಾಯಕರಿಂದ ಪಕ್ಷಕ್ಕೆ- ಮೈತ್ರಿ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತಿದೆ ಎನ್ನುವ ವಿಚಾರವನ್ನು ಸಹ ಅಷ್ಟೆ ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಮೇಶ್ ಜಾರಕಿಹೊಳಿಗೆ ಹೈಕಮಾಂಡ್ ಈಗಾಗಲೇ ಬುಲಾವ್ ನೀಡಿದೆ. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ದೆಹಲಿಗೆ ಬರುವಂತೆ ತಿಳಿಸಲಾಗಿದೆ. ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಜೊತೆ ಮಾತುಕತೆ ನಡೆಸಲು ದೆಹಲಿಗೆ ಲಕ್ಷ್ಮೀ ಹೆಬ್ಬಾಳ್ಕರ್ ದೆಹಲಿಗೆ ತೆರಳುತ್ತಿದ್ದಾರೆ.

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೂ ಇಬ್ಬರು ನಾಯಕರ ನಡುವಿನ ಮನಸ್ಥಾಪ ಮಾತ್ರ ಮರೆಯಾಗಿಲ್ಲ. ಈ ಹಿಂದೆ ಪಿಎಲ್ ಡಿ ಬ್ಯಾಂಕ್ ಚುನಾವಣೆ ವೇಳೆ ಇಬ್ಬರ ನಡುವಿನ ಶೀತಲ ಸಮರ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಮಾಡಿತ್ತು.