ಪಕ್ಷದ ವಕ್ತಾರರ ನೇಮಕಕ್ಕೆ ಲಿಖಿತ್ ಪರೀಕ್ಷೆವಿನೂತನ ಪ್ರಯತ್ನಕ್ಕೆ ಮುಂದಾದ ಕಾಂಗ್ರೆಸ್ ಲಿಖಿತ ಪರೀಕ್ಷೆಗಳ ಮೂಲಕ ವಕ್ತಾರರ ನೇಮಕಸಂದರ್ಶನದಲ್ಲಿ ಪ್ರಶ್ನಾವಳಿಗಳ ಸರಮಾಲೆ   

ಲಕ್ನೋ(ಜೂ.29): ಒಂದೊಂದಾಗಿ ರಾಜ್ಯಗಳನ್ನು ಕಳೆದುಕೊಳ್ಳುತ್ತಾ ಅಧಿಕಾರಕ್ಕಾಗಿ ಪರಿತಪಿಸುತ್ತಿರುವ ಕಾಂಗ್ರೆಸ್ ಪಕ್ಷ, ತನ್ನ ಸಮರ್ಥನೆಗೆ ವಕ್ತಾರರನ್ನು ನೇಮಿಸುವಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಲಿಖಿತ ಪರೀಕ್ಷೆ ಮೂಲಕ ಪಕ್ಷದ ವಕ್ತಾರರನ್ನು ನೇಮಕ ಮಾಡಲು ಮುಂದಾಗಿದೆ. 

ಉತ್ತರ ಪ್ರದೇಶದ ಕಾಂಗ್ರೆಸ್ ಘಟಕಕ್ಕೆ ವಕ್ತಾರರನ್ನು ನೇಮಕ ಮಾಡುವುದಕ್ಕೂ ಮುನ್ನ ಪ್ರಸಕ್ತ ವಿದ್ಯಮಾನಗಳ ಕುರಿತ ಜ್ಞಾನವನ್ನು ಪರೀಕ್ಷಿಸಲು ಕಾಂಗ್ರೆಸ್ ಮುಂದಾಗಿದ್ದು, ಲಿಖಿತ ಪರೀಕ್ಷೆಯನ್ನು ನಡೆಸಿದೆ. ಯುವಕರು, ಪಳಗಿದ ರಾಜಕಾರಣಿಗಳೂ ಸೇರಿದಂತೆ 70 ಕಾಂಗ್ರೆಸ್ ಪಕ್ಷದ ನಾಯಕರು ವಕ್ತಾರರಾಗಲು ಪರೀಕ್ಷೆ ಎದುರಿಸಿದ್ದಾರೆ. 

ಲಿಖಿತ ಪರೀಕ್ಷೆಯ ನಂತರ ಪರೀಕ್ಷೆ ಎದುರಿಸಿದವರಿಗೆ ಸಂದರ್ಶನವನ್ನೂ ನಡೆಸಲಾಗಿದ್ದು, ವಕ್ತಾರ ಹುದ್ದೆ ಬಯಸಲಿ ಬಂದವರಿಗೆ ಸುಮಾರು 14 ಪ್ರಶ್ನೆಗಳನ್ನು ಕೇಳಲಾಗಿದೆ. ರಾಜ್ಯದಲ್ಲಿರುವ ಜಿಲ್ಲೆ, ಬ್ಲಾಕ್ ಗಳು, ಲೋಕಸಭಾ ಸದಸ್ಯರ ಸಂಖ್ಯೆ, ವಿಧಾನಸಭಾ ಸದಸ್ಯರ ಬಲಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ವಿಫಲವಾಗಿರುವ ಪ್ರಮುಖ ಅಂಶಗಳನ್ನು ವಿವರಿಸಲು ಹಾಗೂ ಮನಮೋಹನ್ ಸಿಂಗ್ ಸರ್ಕಾರದ ಸಾಧನೆಯನ್ನು ವಿವರಿಸುವಂತೆ ಸಂದರ್ಶನದಲ್ಲಿ ಕೇಳಲಾಗಿತ್ತು.

Scroll to load tweet…

2019 ರ ಲೋಕಸಭಾ ಚುನಾವಣೆ ಮಹತ್ವದ್ದಾಗಿರುವುದರಿಂದ ಕಾಂಗ್ರೆಸ್ ಪಕ್ಷ ಎಚ್ಚರಿಕೆಯಿಂದ ತನ್ನ ವಕ್ತಾರರನ್ನು ನೇಮಕ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಲಿಖಿತ ಪರೀಕ್ಷೆ ಮೂಲಕ ಪಕ್ಷದ ವಕ್ತಾರರನ್ನು ನೇಮಕ ಮಾಡಲು ಮುಂದಾಗಿದೆ.