ಭುವನೇಶ್ವರ್, (ಜ.20): ಕೇಂದ್ರದ ಮಾಜಿ ಸಚಿವ ಶ್ರೀಕಾಂತ್‌ ಜೆನಾ ಮತ್ತು ಮಾಜಿ ಶಾಸಕ ಕೃಷ್ಣ ಚಂದ್ರ ಸಾಗರಿಯಾ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ.

ಒಡಿಶಾ ಕಾಂಗ್ರೆಸ್ ಸಮಿತಿಯ ಸಂಚಾಲಕ ಅನಂತ್‌ ಪ್ರಸಾದ್‌ ಸೇಥಿ ಅವರು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಒಡಿಶಾ ಕಾಂಗ್ರೆಸ್ ಶಿಸ್ತು ಪಾಲನ ಸಮಿತಿ ಈ ನಿರ್ಧಾರವನ್ನು ಘೋಷಿಸಿದ್ದಾರೆ. 

ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪ ಕೇಳಿಬಂದಿದ್ದರಿಂದ ಜೇನಾ ಮತ್ತು ಸಾಗರಿಯ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅನುಮೋದನೆ ಪ್ರಕಾರ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಜೇನಾ ಅವರು ಕೇಂದ್ರ ಸಚಿವರಾಗಿದ್ದರು. ದಲಿತ ನಾಯಕರಾಗಿರುವ ಸಾಗರಿಯಾ ಅವರು ಕೋರಪುಟ್‌ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.