ಕಾಂಗ್ರೆಸ್ ಇಂದು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆಯೆಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಒಡ್ಡಿರುವ ಸವಾಲಗಳನ್ನು ಎದುರಿಸಲು ಕಾಂಗ್ರೆಸ್ ಸಾಮೂಹಿಕವಾಗಿ ಪ್ರಯತ್ನಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಕೊಚ್ಚಿ: ಕಾಂಗ್ರೆಸ್ ಇಂದು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆಯೆಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.

ಮೋದಿ ಹಾಗೂ ಅಮಿತ್ ಶಾ ಒಡ್ಡಿರುವ ಸವಾಲಗಳನ್ನು ಎದುರಿಸಲು ಕಾಂಗ್ರೆಸ್ ಸಾಮೂಹಿಕವಾಗಿ ಪ್ರಯತ್ನಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಇಂದು ಗಂಭೀರ ಸವಾಲನ್ನು ಎದುರಿಸುತ್ತಿದೆ. ಕಾಂಗ್ರೆಸ್ 1977ರಲ್ಲಿ ಹಾಗೂ 1996 ರಿಂದ 2014ರವರೆಗೆ ಚುನಾವಣಾ ಬಿಕ್ಕಟ್ಟನ್ನು ಅನುಭವಿಸಿತ್ತು. ಆದರೆ ಈಗ ಅಸ್ತಿತ್ವದ ಪ್ರಶ್ನೆಯನ್ನೇ ಎದುರಿಸುತ್ತಿದೆ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ತನ್ನ 44 ಗುಜರಾತ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್’ನಲ್ಲಿರಿಸದ ಕ್ರಮವನ್ನು ಸಮರ್ಥಿಸಿರುವ ಜೈರಾಮ್ ರಮೇಶ್, ಈ ಹಿಂದೆ ಬಿಜೆಪಿಯೂ ಇದನ್ನೇ ಮಾಡಿತ್ತು ಎಂದಿದ್ದಾರೆ.

ನಾವು ಮೋದಿ ಹಾಗೂ ಶಾರನ್ನು ಎದುರಿಸುತ್ತಿದ್ದೇವೆ ಎಂದು ಅರ್ಥಮಾಡಿಕೊಳ್ಳಬೇಕು, ಅವರು ವಿಭಿನ್ನವಾಗಿ ಯೋಚಿಸುತ್ತಾರೆ ಹಾಗೂ ವಿಭಿನ್ನವಾಗಿ ಕೆಲಸ ಮಾಡುತ್ತಾರೆ. ನಾವು ಕೂಡಾ ಸಂದರ್ಭಕ್ಕೆ ತಕ್ಕಂತೆ ಕೆಲಸ ಮಾಡದಿದ್ದರೆ, ಅಪ್ರಸ್ತುತರಾಗಿ ಬಿಡುತ್ತೇವೆ ಎಂದು ಅವರು ಹೇಳಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಕೆಲಸ ಮಾಡುವುದು ಎಂದು ಕಾಂಗ್ರೆಸ್ ನಂಬಿದ್ದರೆ ಅದು ತಪ್ಪು ಎಂದು ಅವರು ಹೇಳಿದ್ದಾರೆ. ಹಳೆ ಘೋಷಣೆಗಳು, ಹಳೆ ಸೂತ್ರಗಳು, ಹಳೆ ಮಂತ್ರಗಳು ಕೆಲಸ ಮಾಡಲ್ಲ. ಭಾರತವು ಬದಲಾಗಿದೆ, ಕಾಂಗ್ರೆಸ್ ಕೂಡಾ ಬದಲಾಗಬೇಕು ಎಂದು ಅವರು ಹೇಳಿದ್ದಾರೆ.