ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ

First Published 15, Mar 2018, 7:15 AM IST
Congress Election Candidate Selection
Highlights

ಮುಂಬ​ರುವ ಚುನಾ​ವ​ಣೆಗೆ ಅಭ್ಯರ್ಥಿ ಆಯ್ಕೆ​ಗಾಗಿ ನಡೆದ ಕಾಂಗ್ರೆಸ್‌ ಚುನಾ​ವಣಾ ಸಮಿ​ತಿ​ ಸಭೆಯಲ್ಲಿ ಅರ್ಜಿಗಳ ಬಗೆಗಿನ ಚರ್ಚೆಗಿಂತ ರಾಹುಲ್‌ ಗಾಂಧಿ ಅವರ ಮೂರನೇ ಹಂತದ ಜನಾ​ಶೀ​ರ್ವಾದ ಯಾತ್ರೆ​ಯನ್ನು ಯಶ​ಸ್ವಿ​ಗೊ​ಳಿ​ಸು​ವುದು ಹೇಗೆ ಎಂಬ ಬಗ್ಗೆ ಹೆಚ್ಚು ಚರ್ಚೆ ನಡೆ​ದಿದೆ.

ಬೆಂಗ​ಳೂ​ರು : ಮುಂಬ​ರುವ ಚುನಾ​ವ​ಣೆಗೆ ಅಭ್ಯರ್ಥಿ ಆಯ್ಕೆ​ಗಾಗಿ ನಡೆದ ಕಾಂಗ್ರೆಸ್‌ ಚುನಾ​ವಣಾ ಸಮಿ​ತಿ​ ಸಭೆಯಲ್ಲಿ ಅರ್ಜಿಗಳ ಬಗೆಗಿನ ಚರ್ಚೆಗಿಂತ ರಾಹುಲ್‌ ಗಾಂಧಿ ಅವರ ಮೂರನೇ ಹಂತದ ಜನಾ​ಶೀ​ರ್ವಾದ ಯಾತ್ರೆ​ಯನ್ನು ಯಶ​ಸ್ವಿ​ಗೊ​ಳಿ​ಸು​ವುದು ಹೇಗೆ ಎಂಬ ಬಗ್ಗೆ ಹೆಚ್ಚು ಚರ್ಚೆ ನಡೆ​ದಿದೆ.

ರಾಹುಲ್‌ ಗಾಂಧಿ ಮಾ.20 ಹಾಗೂ 21ರಂದು ಕರಾ​ವ​ಳಿ ಹಾಗೂ ಮಾ.24 ಹಾಗೂ 25ರಂದು ಹಳೆ ಮೈಸೂರು ಭಾಗ​ದಲ್ಲಿ ಜನಾ​ಶೀ​ರ್ವಾದ ಪ್ರವಾಸ ಕೈಗೊ​ಳ್ಳ​ಲಿ​ದ್ದಾರೆ. ರಾಹುಲ್‌ ಪ್ರವಾಸ ಯಶ​ಸ್ವಿ​ಗೊ​ಳಿ​ಸು​ವು​ದನ್ನು ಕಾಂಗ್ರೆಸ್‌ ಎಷ್ಟುಗಂಭೀ​ರ​ವಾಗಿ ಪರಿ​ಗ​ಣಿ​ಸಿ​ದೆ​ಯೆಂದರೆ ಈ ಭಾಗದ ಉಸ್ತು​ವಾರಿ ಸಚಿ​ವರು, ಮುಖಂಡರು ಹಾಗೂ ಪದಾ​ಧಿ​ಕಾ​ರಿ​ಗಳಿಗೆ ಮಾ.16ರಿಂದ ದೆಹ​ಲಿ​ಯಲ್ಲಿ ನಡೆ​ಯ​ಲಿ​ರುವ ಎಐ​ಸಿಸಿ ಮಹಾ​ಧಿ​ವೇ​ಶ​ನ​ದಲ್ಲಿ ಪಾಲ್ಗೊ​ಳ್ಳದೆ ಪ್ರವಾ​ಸದ ಯಶ​ಸ್ಸಿಗೆ ಕ್ಷೇತ್ರ​ದಲ್ಲೇ ಶ್ರಮಿ​ಸಲು ತಾಕೀತು ಮಾಡಿ​ದೆ.

ವಿಶೇ​ಷ​ವಾಗಿ ಬಿಜೆಪಿ ಪ್ರಬ​ಲ​ವಾ​ಗಿ​ರುವ ಕರಾ​ವಳಿ ಭಾಗ​ದಲ್ಲಿ ರಾಹುಲ್‌ ಗಾಂಧಿ ಅವರ ಪ್ರವಾಸವನ್ನು ಯಶ​ಸ್ವಿಗೊ​ಳಿ​ಸಲು ರೂಪಿ​ಸ​ಬೇ​ಕಾದ ಕಾರ್ಯ​ತಂತ್ರದ ಬಗ್ಗೆ ಚುನಾ​ವಣಾ ಸಮಿತಿ ಸಭೆ​ಯಲ್ಲಿ ಗಂಭೀರ ಚರ್ಚೆ ನಡೆ​ಯಿತು. ರಾಹುಲ್‌ ಅವರ ಕರಾ​ವಳಿ ಪ್ರವಾ​ಸದ ವೇಳೆ ಬಿಜೆಪಿ ಕಿರಿ​ಕಿರಿ ಉಂಟುಮಾಡಲು ಯತ್ನಿ​ಸು​ವುದು ಖಚಿತ. ಇದನ್ನು ತಡೆ​ಯ​ಬೇಕು. ಯಾವುದೇ ಅಹಿ​ತ​ಕರ ಹಾಗೂ ಮುಜು​ಗರ ತರು​ವಂತಹ ಘಟನೆ ನಡೆ​ಯ​ದಂತೆ ಎಚ್ಚ​ರಿಕೆ ವಹಿ​ಸ​ಬೇಕು. ರಾಹುಲ್‌ ಪಾಲ್ಗೊ​ಳ್ಳುವ ಕಾರ್ಯ​ಕ್ರ​ಮ​ಗಳು ಯಶ​ಸ್ವಿ​ಯಾ​ಗಲು ಜನ ಹೆಚ್ಚಿನ ಸಂಖ್ಯೆ ಪಾಲ್ಗೊ​ಳ್ಳು​ವಂತೆ ಮಾಡ​ಬೇಕು ಎಂದು ಆ ಭಾಗದ ನಾಯ​ಕ​ರಿಗೆ ತಾಕೀತು ಮಾಡಲು ಸಭೆ​ಯಲ್ಲಿ ತೀರ್ಮಾ​ನಿ​ಸ​ಲಾ​ಯಿ​ತು.

ಬಿಜೆಪಿಗೆ ಬ್ಯಾಡ್‌ ಲಕ್‌:

ಇದೇ ವೇಳೆ ಗೆಲು​ವಿನ ಮಾನ​ದಂಡ​ವಿ​ಟ್ಟು​ಕೊಂಡು ಅರ್ಹ ಅಭ್ಯ​ರ್ಥಿ​ಗಳ ಪ್ಯಾನೆಲ್‌ ಸಿದ್ಧಪ​ಡಿ​ಸು​ವಂತೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ, ಕೆಪಿ​ಸಿಸಿ ಅಧ್ಯಕ್ಷ ಡಾ.ಜಿ. ಪರ​ಮೇ​ಶ್ವರ್‌ ಹಾಗೂ ರಾಜ್ಯ ಉಸ್ತು​ವಾ​ರಿ ವೇಣು​ಗೋ​ಪಾಲ್‌ ಅವರು ಸಮಿ​ತಿಯ ಸದ​ಸ್ಯ​ರಿಗೆ ಸೂಚನೆ ನೀಡಿ​ದ​ರು.

ನಿಮ್ಮ ಹಿಂಬಾ​ಲ​ಕರು, ಪ್ರಭಾವ ಬೀರಿ​ದ​ವರು ಎಂಬ ಕಾರ​ಣಕ್ಕೆ ಪಟ್ಟಿ​ಯಲ್ಲಿ ಅನ​ರ್ಹರ ಹೆಸರು ಸೇರಿ​ಸ​ಬೇಡಿ. ಏಕೆಂದರೆ, ಪಟ್ಟಿ​ಯಲ್ಲಿ ಯಾವುದೇ ಹೆಸರು ಬಂದರೂ ಪ್ರತಿ ಕ್ಷೇತ್ರದ ಬಗ್ಗೆ ಈಗಾ​ಗಲೇ ಕೆಪಿ​ಸಿಸಿ ಹಾಗೂ ಎಐ​ಸಿಸಿ ಪ್ರತ್ಯೇ​ಕ​ವಾಗಿ ನಡೆ​ಸಿ​ರುವ ಸಮೀಕ್ಷೆ ವರ​ದಿ​, ವೀಕ್ಷ​ಕ​ರು ಮತ್ತು ಸ್ಥಳೀಯ ಪದಾ​ಧಿ​ಕಾ​ರಿ​ಗಳು ನೀಡಿ​ರುವ ವರ​ದಿ​ಯನ್ನು ಆಧ​ರಿ​ಸಿಯೇ ಅಂತಿ​ಮ​ವಾಗಿ ಅಭ್ಯ​ರ್ಥಿ​ಯನ್ನು ಆಯ್ಕೆ ಮಾಡ​ಲಾ​ಗು​ತ್ತದೆ. ಹೀಗಾಗಿ, ಅನ​ರ್ಹ​ರನ್ನು ಪಟ್ಟಿ​ಯಲ್ಲಿ ಸೇರಿ​ಸ​ಬೇಡಿ ಎಂದು ಸೂಚಿ​ಸಿ​ದರು ಎನ್ನ​ಲಾ​ಗಿ​ದೆ.

ಕರ್ನಾ​ಟ​ಕ​ದಲ್ಲಿ ಈ ಬಾರಿ ಕಾಂಗ್ರೆಸ್‌ ಬಿಜೆ​ಪಿ​ಯನ್ನು ಮಣಿ​ಸಿ​ದರೆ ನಮ್ಮ ರಾಜ್ಯ​ದಿಂದಲೇ ಆ ಪಕ್ಷಕ್ಕೆ ಆರಂಭ​ವಾ​ಗುವ ಬ್ಯಾಡ್‌ ಲಕ್‌ ದೇಶಾ​ದ್ಯಂತ ವಿಸ್ತ​ರಿ​ಸ​ಲಿದೆ. ಹೀಗಾಗಿ ಪ್ರತಿಷ್ಠೆ ಬಿಟ್ಟು ದೇಶ ಹಾಗೂ ಪಕ್ಷದ ಹಿತ​ದೃ​ಷ್ಟಿ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಅಭ್ಯ​ರ್ಥಿ​ಗ​ಳನ್ನು ಆಯ್ಕೆ ಮಾಡ​ಬೇಕು ಎಂದು ನಾಯ​ಕರು ಸಭೆ​ಯಲ್ಲಿ ಸೂಚಿ​ಸಿ​ದರು ಎಂದು ಮೂಲ​ಗಳು ಹೇಳಿ​ವೆ.

ಪದ್ಮ​ನಾಭನಗರ, ಬೊಮ್ಮ​ನ​ಹ​ಳ್ಳಿಯಲ್ಲಿ ವಲ​ಸಿ​ಗ​ರಿಗೆ ಟಿಕೆ​ಟ್‌:

ಸಭೆ​ಯಲ್ಲಿ ಬೆಂಗ​ಳೂ​ರಿ​ನಲ್ಲಿ ಬಿಜೆಪಿ ಗೆದ್ದಿ​ರುವ ಕ್ಷೇತ್ರ​ಗ​ಳಾದ ಪದ್ಮ​ನಾ​ಭ​ನ​ಗರ ಹಾಗೂ ಬೊಮ್ಮ​ನ​ಹಳ್ಳಿ ಕ್ಷೇತ್ರ​ಗಳಿಗೆ ಬಿಜೆಪಿ ಬಂಡಾ​ಯ​ಗಾ​ರ​ರಿಗೆ ಟಿಕೆ​ಟ್‌ ನೀಡಲು ಸಭೆ ತೀರ್ಮಾ​ನಿ​ಸಿತು ಎಂದು ಮೂಲ​ಗಳು ಹೇಳಿ​ವೆ. ಗೃಹ ಸಚಿವ ರಾಮ​ಲಿಂಗಾ​ರೆಡ್ಡಿ ಅವ​ರೊಂದಿಗೆ ಈ ಕ್ಷೇತ್ರ​ಗಳ ಕೆಲ ಬಿಜೆಪಿ ನಾಯ​ಕರು ಸಂಪ​ರ್ಕ​ದ​ಲ್ಲಿದ್ದು, ಅವರು ಶೀಘ್ರವೇ ಪಕ್ಷಕ್ಕೆ ಸೇರ್ಪ​ಡೆ​ಯಾ​ಗ​ಲಿ​ದ್ದಾರೆ. ಅವ​ರಿಗೆ ಪಕ್ಷದ ಟಿಕೆಟ್‌ ನೀಡ​ಬೇಕು ಎಂದು ಸಭೆ​ಯಲ್ಲಿ ತೀರ್ಮಾ​ನಿ​ಸ​ಲಾ​ಯಿತು ಎಂದು ಮೂಲ​ಗಳು ಹೇಳಿ​ವೆ.

ಮಂಗಳೂರಿನಿಂದ ಶೃಂಗೇರಿಗೆ ರಾಹುಲ್‌

ರಾಹುಲ್‌ ಗಾಂಧಿ ಅವರ ಕರಾ​ವಳಿ ಪ್ರವಾ​ಸದ ಕಾರ್ಯ​ಕ್ರಮ ನಿಗ​ದಿ​ಯಾ​ಗಿದೆ. ಮಾ.20ರಂದು ಕಾಪು​ವಿಗೆ ಆಗ​ಮಿ​ಸುವ ಅವರು, ಕಾಪು​ವಿ​ನಲ್ಲಿ ಕಾರ್ನರ್‌ ಮೀಟಿಂಗ್‌ ನಡೆ​ಸ​ಲಿ​ದ್ದಾರೆ. ಅನಂತರ ಮಂಗ​ಳೂ​ರಿ​ನ​ವ​ರೆಗೆ ರೋಡ್‌ಶೋ ನಡೆ​ಸು​ವರು. ಸಂಜೆ ಮಂಗ​ಳೂ​ರಿ​ನಲ್ಲಿ ಸಾರ್ವ​ಜ​ನಿಕ ಸಭೆ ಉದ್ದೇ​ಶಿಸಿ ಮಾತ​ನಾ​ಡುವ ಅವರು ಅಂದು ರಾತ್ರಿ ಮಂಗ​ಳೂ​ರಿ​ನಲ್ಲಿ ತಂಗು​ವ​ರು.

ಮಾ.21ಕ್ಕೆ ಹೆಲಿ​ಕಾ​ಪ್ಟರ್‌ ಮೂಲಕ ಶೃಂಗೇ​ರಿಗೆ ತೆರಳಿ ಶಾರದಾಂಬೆಯ ದರ್ಶನ ಪಡೆ​ಯ​ವರು. ಅನಂತರ ಶೃಂಗೇ​ರಿ​ಯಲ್ಲಿ ಸಾರ್ವ​ಜ​ನಿಕ ಸಭೆ ನಡೆ​ಸು​ವರು. ಇದಾದ ನಂತರ ಶೃಂಗೇ​ರಿ​ಯಿಂದ ಹಾಸ​ನಕ್ಕೆ ಹೆಲಿ​ಕಾ​ಪ್ಟರ್‌ ಮೂಲಕ ಆಗ​ಮಿಸಿ ಸಾರ್ವ​ಜ​ನಿಕ ಸಭೆಯಲ್ಲಿ ಪಾಲ್ಗೊ​ಳ್ಳು​ವರು. ಸಂಜೆ ದೆಹ​ಲಿಗೆ ತೆರ​ಳು​ವ​ರು. ಮಾ.24 ಹಾಗೂ ಮಾ.25ರಂದು ಅವರು ಮಂಡ್ಯ, ಮೈಸೂರು ಹಾಗೂ ಚಾಮ​ರಾ​ಜ​ನ​ಗ​ರ​ದಲ್ಲಿ ಪ್ರವಾಸ ಕೈಗೊ​ಳ್ಳು​ವರು.

loader