ಮಂಡ್ಯ ನಗರಸಭೆ 28ನೇ ವಾರ್ಡ್ ಉಪ ಚುನಾವಣೆಯಲ್ಲಿ  ಜೆಡಿಎಸ್ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. ಈ ಮೂಲಕ ಮಾಜಿ ಸಚಿವ ಅಂಬರೀಶ್'ಗೆ ತಮ್ಮ ತವರು ನಾಡು ಮಂಡ್ಯದಲ್ಲೇ ಭಾರೀ ಮುಖಭಂಗವಾಗಿದೆ.

ಮಂಡ್ಯ(ಜು.05): ಮಂಡ್ಯ ನಗರಸಭೆ 28ನೇ ವಾರ್ಡ್ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಪಡೆದಿದ್ದಾರೆ. ಈ ಮೂಲಕ ಮಾಜಿ ಸಚಿವ ಅಂಬರೀಶ್'ಗೆ ತಮ್ಮ ತವರು ನಾಡು ಮಂಡ್ಯದಲ್ಲೇ ಭಾರೀ ಮುಖಭಂಗವಾಗಿದೆ.

Add Asianetnews Kannada as a Preferred SourcegooglePreferred

ಮಂಡ್ಯ ನಗರಸಭೆ 28ನೇ ವಾರ್ಡ್ 'ನಲ್ಲಿ ಪಕ್ಷೇತರ ಸದಸ್ಯ ಬಿ.ಸಿದ್ದರಾಜು ರಾಜೀನಾಮೆಯಿಂದ ಸ್ಥಾನ ತೆರವಾಗಿತ್ತು. ಇದಕ್ಕಾಗಿ ನಡೆದ ಉಪ ಚುನಾವಣೆಯಲ್ಲಿ ರಾಜು ಎಂಬವರು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದರು. ಈ ಉಪ ಚುನಾವಣೆಯಲ್ಲಿ 1153ಮತ ಪಡೆದ ರಾಜು ಅವರು ಕಾಂಗ್ರೆಸ್ ಅಭ್ಯರ್ಥಿ ಉರುಫ್ ದೇವಯ್ಯರನ್ನು 207 ಮತಗಳಿಂದ ಸೋಲಿಸಿದ್ದಾರೆ.

ಜುಲೈ ಎರಡರಂದು ನಡೆದಿದ್ದ ಉಪ ಚುನಾವಣೆಯಲ್ಲಿ ಒಟ್ಟು 2200ಮಂದಿ ಮತದಾನ ಮಾಡಿದ್ದರು. ಇದರಲ್ಲಿ ಕಾಂಗ್ರೆಸ್ ಉರುಫ್ ದೇವಯ್ಯಗೆ 946, ಬಿಜೆಪಿ ಅಭ್ಯರ್ಥಿ ತಾಯಮ್ಮಗೆ 79 ಮತಗಳು ಸಿಕ್ಕಿದ್ದು, ರಾಜು 1153 ಪಡೆದಿದ್ದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಪರ ಖುದ್ದು ಶಾಸಕ ಅಂಬರೀಶ್, ಸಚಿವ ಕೃಷ್ಣಪ್ಪ ಬಿರುಸಿನ ಪ್ರಚಾರ ನಡೆಸಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿಯ ಗೆಲುವಿನಿಂದ ಕಾಂಗ್ರೆಸ್ ನಾಯಕರಿಗೆ ಭಾರೀ ಮುಖಭಂಗವಾಗಿದೆ.