ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಪಕ್ಷದ ನಾಯಕರು ಸೋಮವಾರ ಬೆಳಗ್ಗೆ ದೆಹಲಿಗೆ ತೆರಳಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿ ಏ.14ರೊಳಗೆ ಪ್ರಕಟವಾಗಲಿದೆ.

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಪಕ್ಷದ ನಾಯಕರು ಸೋಮವಾರ ಬೆಳಗ್ಗೆ ದೆಹಲಿಗೆ ತೆರಳಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿ ಏ.14ರೊಳಗೆ ಪ್ರಕಟವಾಗಲಿದೆ.

ಏ.9, 10ರಂದು ಸ್ಕ್ರೀನಿಂಗ್ ಕಮಿಟಿ ಸಭೆ, ನಂತರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಕೆಲವು ಸಮಸ್ಯಾತ್ಮಕ ಕ್ಷೇತ್ರಗಳನ್ನು ಬಿಟ್ಟು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಖೈರಾಗಲಿದೆ.

ಆದರೆ, ಹಾಲಿ ಶಾಸಕರು ಹಾಗೂ ಒಂಟಿ ಹೆಸರಿರುವ 120-150 ಕ್ಷೇತ್ರಗಳ ಮೊದಲ ಪಟ್ಟಿ ಏ.14ರೊಳಗೆ ಪ್ರಕಟವಾಗಲಿದೆ. ಉಳಿದ ಹೆಸರು ಕ್ರಮೇಣ ಬಹಿರಂಗಗೊಳ್ಳಲಿವೆ.