ಅವಿರೋಧವಾಗಿ ಆಯ್ಕೆ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು, ಆದರೆ ಈಗ ಬಿಜೆಪಿಯ ಎಲ್ಲಾ ಗಂಡಸರು ಚುಚ್ಚಿ ಮಾತನಾಡುತ್ತಿದ್ದಾರೆ, ಇದನ್ನು ಹೇಗೆ ಸಹಿಸಲಿ? ಮಾನಸಿಕ ನೋವು ಸಹಿಸಿಕೊಳ್ಳುವುದು ಕಷ್ಟ, ಎಂದು ಗೀತಾ ಮಹದೇವ ಪ್ರಸಾದ್ ಕಣ್ಣೀರಿಟ್ಟಿದ್ದಾರೆ.
ಗುಂಡ್ಲುಪೇಟೆ (ಮಾ.28): ಗುಂಡ್ಲುಪೇಟೆ ಉಪಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕಣ್ಣೀರಿಟ್ಟ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವಿರೋಧವಾಗಿ ಆಯ್ಕೆ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು, ಆದರೆ ಈಗ ಬಿಜೆಪಿಯ ಎಲ್ಲಾ ಗಂಡಸರು ಚುಚ್ಚಿ ಮಾತನಾಡುತ್ತಿದ್ದಾರೆ, ಇದನ್ನು ಹೇಗೆ ಸಹಿಸಲಿ? ಮಾನಸಿಕ ನೋವು ಸಹಿಸಿಕೊಳ್ಳುವುದು ಕಷ್ಟ, ಎಂದು ಗೀತಾ ಮಹದೇವ ಪ್ರಸಾದ್ ಕಣ್ಣೀರಿಟ್ಟಿದ್ದಾರೆ.
ಬೇಕಿತ್ತಾ ನಂಗೆ ಇದೆಲ್ಲಾ ಅನ್ನಿಸಿಬಿಡುತ್ತದೆ. ಸುಸಂಸ್ಕೃತ ಕುಟುಂಬ ನಮ್ಮದು,ಬಿಜೆಪಿಯವರು ಎಷ್ಟು ಅವಹೇಳನಕಾರಿಯಾಗಿ ಮಾತನಾಡ್ತಾರೆ,ಈ ರೀತಿ ಮಾಡುವುದನ್ನು ನಿಲ್ಲಿಸಬೇಕು. ನನ್ನ ಹಿನ್ನೆಲೆ ಗೊತ್ತಿಲ್ಲದೇ ಏನೇನೋ ಮಾತಾಡುವುದು ನಿಲ್ಲಬೇಕು, ಮಾಧ್ಯಮದವರಾದರೂ ನನ್ನ ನೆರವಿಗೆ ಬರಬೇಕು, ಎಂದು ಗೀತಾ ಹೇಳಿದ್ದಾರೆ.