ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ| ಗಡಿಯಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ| ಕಾರ್ಯಕಾರಿ ಸಮಿತಿ ಸಭೆ ರದ್ದುಗೊಳಿಸಿದ ಕಾಂಗ್ರೆಸ್| ಪಕ್ಷ ದೇಶ ಮತ್ತು ಜನತೆಯ ಪರವಾಗಿ ನಿಲ್ಲಲಿದೆ ಎಂದ ಕಾಂಗ್ರೆಸ್|

ನವದೆಹಲಿ(ಫೆ.27): ಭಾರತ - ಪಾಕಿಸ್ತಾನ ಗಡಿಯಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಳೆ(ಫೆ.28) ಅಹ್ಮದಾಬಾದ್‌ ನಲ್ಲಿ ನಡೆಯಬೇಕಿದ್ದ ಕಾರ್ಯಕಾರಿ ಸಮಿತಿ ಸಭೆ ಹಾಗೂ ಸಂಕಲ್ಪ ಸಮಾವೇಶವನ್ನು ಮುಂದೂಡಿದೆ.

Scroll to load tweet…

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಸ್ಥಿತಿಯಲ್ಲಿ ನಾವು ದೇಶದ ಪರವಾಗಿ ನಿಲ್ಲಬೇಕಾಗಿದೆ. ಹೀಗಾಗಿ ಸಿಡಬ್ಲ್ಯುಸಿ ಸಭೆಯನ್ನು ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

Scroll to load tweet…