ಖಾತೆ ಆಯ್ತು ಈಗ ಕ್ಯಾಬಿನೆಟ್ ಕಸರತ್ತು ಶುರುವಾಗಿದೆ.  ಕೈ ಪಾಳಯದಲ್ಲಿ ಎರಡು ಪ್ರತ್ಯೇಕ ಸಚಿವರ ಪಟ್ಟಿ ಸಿದ್ದವಾಗಿದೆ. ಎರಡೂ ಪಟ್ಟಿಗಳು ಕಾಂಗ್ರೆಸ್ ಹೈಕಮಾಂಡ್ ಕೈ ತಲುಪಿದೆ. 

ಬೆಂಗಳೂರು (ಜೂ. 03): ಖಾತೆ ಆಯ್ತು ಈಗ ಕ್ಯಾಬಿನೆಟ್ ಕಸರತ್ತು ಶುರುವಾಗಿದೆ. ಕೈ ಪಾಳಯದಲ್ಲಿ ಎರಡು ಪ್ರತ್ಯೇಕ ಸಚಿವರ ಪಟ್ಟಿ ಸಿದ್ದವಾಗಿದೆ. ಎರಡೂ ಪಟ್ಟಿಗಳು ಕಾಂಗ್ರೆಸ್ ಹೈಕಮಾಂಡ್ ಕೈ ತಲುಪಿದೆ.

ಹಿರಿಯ ಶಾಸಕರನ್ನೊಳಗೊಂಡ ಒಂದು ಪಟ್ಟಿ, ಹಿರಿಯ ಶಾಸಕರಿಲ್ಲದ ಎರಡನೇ ಪಟ್ಟಿ ಕೈ ಹೈಕಮಾಂಡ್’ಗೆ ತಲುಪಿದೆ. ಕಳೆದ ಬಾರಿ ಐದು ವರ್ಷ ಪೂರ್ಣಾವಧಿಗೆ ಸಚಿರಾಗಿದ್ದ ಹಿರಿಯ ಶಾಸಕರಿಗೆ ಈ ಬಾರಿ ಸಚಿವ ಸ್ಥಾನ ಬೇಡ ಅಂತಿದ್ದಾರೆ ರಾಹುಲ್ ಗಾಂಧಿ. ಹಾಗಾಗಿ ರಾಜ್ಯ ಕಾಂಗ್ರೆಸ್ ಸಚಿವರ ಎರಡು ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್ ಗೆ ರವಾನಿಸಿದೆ.

ಹಿರಿಯರಲ್ಲಿ ಸಚಿವ ಸ್ಥಾನ ಸಿಗವ ಚಾನ್ಸ್ ಯಾರಿಗೆ? 

ಎಸ್ ಆರ್ ಪಾಟೀಲ್/ ಎಚ್.ಕೆ ಪಾಟೀಲ್

ಕಾನೂನು ಸಂಸದೀಯ ವ್ಯವಹಾರ ಖಾತೆ ನೋಡಿಕೊಳ್ಳುಲು ಅನುಭವಿ ಸಚಿವರು ಬೇಕು. ಸದನದಲ್ಲಿ ಸಂಸದೀಯ ವ್ಯವಹಾರ ನಡೆಸುವ ಸಾಮರ್ಥ್ಯ ಹೊಂದಿರುವ ಕಿರಿಯ ಶಾಸಕರು ಕಾಂಗ್ರೆಸ್ ನಲ್ಲಿ ಇಲ್ಲ. ಹೀಗಾಗಿ ಎಸ್ ಆರ್ ಪಾಟೀಲ್ ಅಥವಾ ಎಚ್.ಕೆ ಪಾಟೀಲ್ ಆಯ್ಕೆ ಇಬ್ಬರಲ್ಲಿ ಒಬ್ಬರನ್ನ ಆಯ್ಕೆ ಮಾಡಲು ಹೈಕಮಾಂಡ್ ಗೆ ಸಲಹೆ ನೀಡಲಾಗಿದೆ. 

ಎಂ.ಬಿ ಪಾಟೀಲ್/ ಶಿವಾನಂದ ಪಾಟೀಲ್

ಎಂ.ಬಿ ಪಾಟೀಲ್ ನೀರಾವರಿ ಖಾತೆಯನ್ನ ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಾಲಿಗೆ ಜಲಸಂಪನ್ಮೂಲ ಖಾತೆ ದೊರೆತಿದ್ದು ಉತ್ತಮ ನಿರ್ವಹಣೆ ಅಗತ್ಯ‌. ಶಿವಾನಂದ ಪಾಟೀಲ್ ಕೂಡಾ ಹಿರಿಯ ಶಾಸಕರು ಸಮರ್ಥರು ಎಂದು ಹೈಕಮಾಂಡ್ ಗೆ ವರದಿ ನೀಡಲಾಗಿದೆ. 

ಶ್ಯಾಮನೂರು ಶಿವಶಂಕರಪ್ಪ 

ಲಿಂಗಾಯತ ಪ್ರಭಾವಿ ಮುಖಂಡ. ದಾವಣೆಗೆರೆಯಲ್ಲಿ ಕಾಂಗ್ರೆಸ್ ಪಕ್ಷ ಉಳಿವಿಗೆ ಇವರಿಗೆ ಸಚಿವ ಸ್ಥಾನ ನೀಡಲು ಒತ್ತಾಯಪಡಿಸಲಾಗಿದೆ. 

ಕೆ.ಜೆ ಜಾರ್ಜ್

 ಕ್ರಿಶ್ಚಿಯನ್ ಸಮುದಾಯದಲ್ಲಿ ಕೋಟಾದಡಿ ಸಚಿವ ಸ್ಥಾನಕ್ಕೆ ಶಿಫಾರಸು ಮಾಡಲಾಗಿದೆ. 

ಆರ್.ವಿ ದೇಶಪಾಂಡೆ

ಸಚಿವ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಶಿಫಾರಸ್ಸು ಮಾಡಿದ್ದಾರೆ. 

ಪುತ್ರರಿಗೆ ಸಚಿವ ಸ್ಥಾನ ಕೊಡಿಸಲು ರಾಜ್ಯ ನಾಯಕರು ದೆಹಲಿ ನಾಯಕರ ಮೇಲೆ ಪ್ರಭಾವ ಬೀರುತ್ತಿರುತ್ತಿದ್ದಾರೆ. 

ರೂಪಾ ಶಶಿಧರ್ - ಸಂಸದ ಕೆ.ಎಚ್ ಮುನಿಯಪ್ಪ ಪುತ್ರಿ

ಪ್ರಿಯಾಂಕ ಖರ್ಗೆ - ಕಾಂಗ್ರೆಸ್ ಸಂಸದೀಯ ನಾಯಕ ಖರ್ಗೆ ಪುತ್ರ

ಅಜಯ್ ಧರ್ಮಸಿಂಗ್ - ಸ್ನೇಹಿತ ದಿವಂಗತ ಧರ್ಮಸಿಂಗ್ ಪುತ್ರನ ಪರ ಖರ್ಗೆ ಲಾಬಿ..

ಯತೀಂದ್ರ - ಮೈಸೂರು ಜಿಲ್ಲಾ ಪ್ರಾತಿನಿದ್ಯದಡಿ ಪುತ್ರನಿಗೆ ಸಚಿವ ಸ್ಥಾನ ಕೊಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಲಾಭಿ..

ಮೊದಲ ಬಾರಿ ಸಚಿವರಾಗಲು ಕೈ ಶಾಸಕರಲ್ಲಿ ಪೈಪೋಟಿ

ಬಿ.ಸಿ ಪಾಟೀಲ್ - ಹಿರೇಕೆರೂರು 

ಶಿವರಾಮ್ ಹೆಬ್ಬಾರ್ - ಯಲ್ಲಾಪುರ

ಎಸ್.ಟಿ ಸೋಮಶೇಖರ್ - ಯಶವಂತಪುರ

ಡಾ. ಸುಧಾಕರ್ - ಚಿಕ್ಕಬಳ್ಳಾಪುರ

ಬೈರತಿ ಬಸವರಾಜ್ - ಕೆ.ಆರ್ ಪುರಂ

ಎನ್.ಎ ಹ್ಯಾರೀಸ್ - ಶಾಂತಿನಗರ

ಭೀಮಾನಾಯಕ್ - ಹಗರಿಬೊಮ್ಮನಹಳ್ಳಿ

ಲಕ್ಷ್ಮೀ ಹೆಬ್ಬಾಳ್ಕರ್ - ಬೆಳಗಾವಿ ಗ್ರಾಮಾಂತರ

ರಾಹುಲ್ ಜೊತೆ ಸ್ನೇಹ ಬಳಸಿ ಪ್ರಮುಖ ಖಾತೆ ಜೊತೆ ಸಚಿವ ಸ್ಥಾನ ಬೇಡಿಕೆ ಇಟ್ಟಿರುವ ಮಾಜಿ ಸಚಿವರು

ದಿನೇಶ್ ಗುಂಡೂರಾವ್ 

ಕೃಷ್ಣಬೈರೇಗೌಡ

ಯು.ಟಿ ಖಾದರ್