ನಂಜನಗೂಡಲ್ಲಿ ಕಾಂಗ್ರೆಸ್ ಪ್ರಚಾರಕ್ಕೇನು ಕಡಿಮೆ ಇಲ್ಲ. ಕಳಲೆ ಗ್ರಾಮದಲ್ಲಿ ಕಾಂಗ್ರೆಸ್ ಪರ ಸಚಿವ ಮಹದೇವಪ್ಪ ಪ್ರಚಾರ ನಡೆಸಿದರು. ಈ ವೇಳೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಕಳಲೆ ಕೇಶವ ಮೂರ್ತಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರು (ಮಾ.27): ನಂಜನಗೂಡು, ಗುಂಡ್ಲುಪೇಟೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ನಂಜನಗೂಡಲ್ಲಿ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಭರ್ಜರಿ ಪ್ರಚಾರವನ್ನು ಮುಂದುವರೆಸಿವೆ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಪರ ಸಂಸದೆ ಶೋಭಾ ಕರಂದ್ಲಾಜೆ ಇಂದು ಪ್ರಚಾರ ನಡೆಸಿದ್ದಾರೆ.
ನಂಜನಗೂಡಲ್ಲಿ ಕಾಂಗ್ರೆಸ್ ಪ್ರಚಾರಕ್ಕೇನು ಕಡಿಮೆ ಇಲ್ಲ. ಕಳಲೆ ಗ್ರಾಮದಲ್ಲಿ ಕಾಂಗ್ರೆಸ್ ಪರ ಸಚಿವ ಮಹದೇವಪ್ಪ ಪ್ರಚಾರ ನಡೆಸಿದರು. ಈ ವೇಳೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಕಳಲೆ ಕೇಶವ ಮೂರ್ತಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಒಕ್ಕಲಿಗರ ಪಕ್ಷ ಎಂಬ ಭಾವನೆ ಬಂದಿದೆ. ನಾನು ಕಾಂಗ್ರೆಸ್ ಸೇರಿದ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆ ಒಟ್ಟಿಗೆ ಮಾಡಿ ವಿಶ್ವಾಸಕ್ಕೆ ಪಡೆದಿದ್ದೇನೆ. ನಮ್ಮ ನಾಯಕರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ನಮ್ಮೆಲ್ಲರ ನೆಚ್ಚಿನ ನಾಯಕರಾದ ಹೆಚ್.ಡಿ.ಕುಮಾರಣ್ಣ ಇರುವಾಗ ಒಕ್ಕಲಿಗ ನಾಯಕರು ಬೆಂಬಲಿಸಿತ್ತಾರೆ ಎಂಬ ವಿಶ್ವಾಸ ಇದೆ. ಇವತ್ತೂ ಕೂಡ ಎಲ್ಲಾ ಒಕ್ಕಲಿಗರು ಕಾಂಗ್ರೆಸ್’ಗೆ ಮತ ನೀಡುತ್ತಾರೆಂಬ ವಿಶ್ವಾಸ ಇದೆ, ಎಂದಿದ್ದಾರೆ.