Asianet Suvarna News Asianet Suvarna News

ಸಭಾಪತಿ ಯುದ್ಧ; ಜೆಡಿಎಸ್'ನ್ನು ಗಾಳಕ್ಕೆ ಬೀಳಿಸಲು ಕಾಂಗ್ರೆಸ್'ನಿಂದ ಹೊರಟ್ಟಿ ಅಸ್ತ್ರ

ಸೆಕ್ಯೂಲರ್ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಇರಬೇಕೆಂಬುದು ನಮ್ಮ ಆಶಯ. ಬಸವರಾಜ್ ಹೊರಟ್ಟಿಯವರನ್ನ ಸಭಾಪತಿಯನ್ನಾಗಿ ಮಾಡಲು ಜೆಡಿಎಸ್ ಬಯಸಿದಲ್ಲಿ ಕಾಂಗ್ರೆಸ್ ಫುಲ್ ಸಪೋರ್ಟ್ ಕೊಡುತ್ತದೆ. ನಮ್ಮ ಉದ್ದೇಶವೂ ಹೊರಟ್ಟಿಯವರನ್ನೇ ಸಭಾಪತಿ ಮಾಡುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

congress attempt to remove dh shankaramurthy continues

ಬೆಂಗಳೂರು(ಜೂನ್ 15): ಬಿಜೆಪಿಯ ಡಿಎಚ್ ಶಂಕರಮೂರ್ತಿಯವರನ್ನು ಹೇಗಾದರೂ ಮಾಡಿ ಪರಿಷತ್ ಸ್ಪೀಕರ್ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಪಣ ತೊಟ್ಟಂತಿದೆ. ಇಂದು ಶಂಕರಮೂರ್ತಿ ವಿರುದ್ಧ ನಡೆಯುವ ಅವಿಶ್ವಾಸ ನಿರ್ಣಯದಲ್ಲಿ ಜಯ ಸಾಧಿಸಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದೆ. ಸಭಾಪತಿ ವಿಚಾರದಲ್ಲಿ ಬಿಜೆಪಿ ಜೊತೆ ಸಖ್ಯ ಮುಂದುವರಿಸುವುದಾಗಿ ನಿನ್ನೆ ಜೆಡಿಎಸ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರೂ ಕಾಂಗ್ರೆಸ್ ಆಸೆ ಕೈಬಿಟ್ಟಿಲ್ಲ. ಜೆಡಿಎಸ್'ನ ನಿಲುವನ್ನು ಬದಲಿಸಲು ಕಾಂಗ್ರೆಸ್ ಪಕ್ಷ ಈಗ ಜಾತ್ಯತೀತ ಅಸ್ತ್ರ ಹೂಡಿದೆ. ಜೊತೆಗೆ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿಯವರನ್ನೇ ಸಭಾಪತಿ ಮಾಡುವುದಾಗಿ ಕಾಂಗ್ರೆಸ್ ಆಫರ್ ಕೊಟ್ಟಿದೆ.

ಸೆಕ್ಯೂಲರ್ ತತ್ವದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಇರಬೇಕೆಂಬುದು ನಮ್ಮ ಆಶಯ. ಬಸವರಾಜ್ ಹೊರಟ್ಟಿಯವರನ್ನ ಸಭಾಪತಿಯನ್ನಾಗಿ ಮಾಡಲು ಜೆಡಿಎಸ್ ಬಯಸಿದಲ್ಲಿ ಕಾಂಗ್ರೆಸ್ ಫುಲ್ ಸಪೋರ್ಟ್ ಕೊಡುತ್ತದೆ. ನಮ್ಮ ಉದ್ದೇಶವೂ ಹೊರಟ್ಟಿಯವರನ್ನೇ ಸಭಾಪತಿ ಮಾಡುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.

ಎಚ್'ಡಿಕೆ ನಿನ್ನೆ ಹೇಳಿದ್ದೇನು?
"ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಜತೆ ಈಗಿರುವ ಮೈತ್ರಿಯನ್ನೇ ಮುಂದುವರೆಸಬೇಕು ಎಂಬುದು ನಮ್ಮ ನಿಲುವು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಸದಸ್ಯರೂ ಗುರುವಾರದ ಕಲಾಪದಲ್ಲಿ ಹಾಜರಿರುವಂತೆ ವಿಪ್‌ ಜಾರಿಗೊಳಿಸಲಾಗಿದೆ. ಯಾರಿಗೆ ಮತ ನೀಡಬೇಕು ಎಂಬುದನ್ನೂ ಅವರಿಗೆ ತಿಳಿಸಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬುಧವಾರ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

Follow Us:
Download App:
  • android
  • ios