ಛತ್ತೀಸ್ಗಡ್ ನೂತನ ಮುಖ್ಯಮಂತ್ರಿಯಾಗಿ ಭೂಪೇಶ್ ಭಾಘೆಲ್| ಭೂಪೇಶ್ ಭಾಘೇಲ್ ಆಯ್ಕೆ ಅಂತಿಮಗೊಳಿಸಿದ ಕಾಂಗ್ರೆಸ್| ಸಿಎಂ ರೇಸ್‌ನಲ್ಲಿದ್ದರು ಇತರ ಮೂವರು ಹಿರಿಯ ನಾಯಕರು| ನಾಳೆ ಮೂರೂ ರಾಜ್ಯಗಳ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ

ರಾಯಪುರ್(ಡಿ.16): ಛತ್ತೀಸ್ಗಡ್ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾಘೆಲ್ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷ ಇಂದು ಆಯ್ಕೆ ಮಾಡಿದೆ.

ರಾಯಪುರ್‌ದಲ್ಲಿ ಇಂದು ನಡೆದ ಶಾಸಕಾಂಗ ಸಭೆಯ ಬಳಿಕ, ಬಾಘೆಲ್ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು.

Scroll to load tweet…

ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದ ಭೂಪೇಶ್ ಬಾಘೆಲ್, ಟಿಎಸ್ ಸಿಂಗ್ ಡಿಯೊ, ತಮರಾಧ್ವಾಜ್ ಸಾಹು ಹಾಗೂ ಚರಣ್ ದಾಸ್ ಮೆಹಂತ ಅವರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ನಿನ್ನೆ ಚರ್ಚೆ ನಡೆಸಿದ್ದರು.

Scroll to load tweet…

ರಾಜಸ್ತಾನ , ಮಧ್ಯಪ್ರದೇಶ ಹಾಗೂ ಛತ್ತೀಸ್ಗಡ್ ನೂತನ ಮುಖ್ಯಮಂತ್ರಿಗಳು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಭಾರಿ ಶಕ್ತಿ ಪ್ರದರ್ಶಿಸುವ ಸಾಧ್ಯತೆ ಇದೆ.