ಸುಪ್ರೀಂ ಕೋರ್ಟ್ ಹೇಳಿದ್ದ ಅವಧಿ ಒಳಗೆ ಅತೃಪ್ತ ಶಾಸಕರು ವಿಧಾನಸೌಧದ ಕಚೇರಿ ತಲುಪಲು ವಿಫಲರಾಗಿದ್ದಾರೆ.  ಅತೃಪ್ತ 11 ಜನ ಶಾಸಕರು ಸ್ಪೀಕರ್ ಮುಂದೆ ಹಾಜರಾಗಿದ್ದಾರೆ.

ಬೆಂಗಳೂರು[ಜು. 11] ಸಂಜೆ 6 ಗಂಟೆಯೊಳಗೆ ಸ್ಪೀಕರ್ ಕಚೇರಿಗೆ ಅತೃಪ್ತರು ತೆರಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಬರುವುದು ಕೊಂಚ ತಡವಾಗಿದೆ. ಇದೀಗ ಸ್ಪೀಕರ್ ರಮೇಶ್ ಕುಮಾರ್ ಸಂಜೆ 7ಕ್ಕೆ ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

"

ಮುಂಬೈನಿಂದ ಹೊರಟ ಅತೃಪ್ತರು ವಿಮಾಣದ ಮೂಲಕ ಬೆಂಗಳೂರಿಗೆ ಬಂದಿಳಿದರು. ಎಚ್‌ ಎ ಎಲ್ ವಿಮಾನ ನಿಲ್ದಾಣದ ಮೂಲಕ ಎಂಜಿ ರಸ್ತೆ ಮಾರ್ಗವಾಗಿ ಸ್ಪೀಕರ್ ಕಚೇರಿಗೆ ಆಗಮಿಸುವಾಗ 4 ನಿಮಿಷ ತಡವಾಗಿತ್ತು. ಬಸ್ ಇಳಿದ ಶಾಸಕ ಬೈರತಿ ಬಸವರಾಜ್ ಅಕ್ಷರಶಃ ಓಡೋಡಿ ಬಂದರು.

ವಿಧಾನಸೌಧದಲ್ಲಿ ಹೊಡಿ-ಬಡಿ, ರಾಜೀನಾಮೆ ಕೊಟ್ಟ ಸುಧಾಕರ್‌ಗೆ ದಿಗ್ಬಂಧನ

ಇದೀಗ 11 ಜನ ಅತೃಪ್ತರು ಸ್ಪೀಕರ್ ಎದುರು ಹಾಜರಾಗಿದ್ದು ವಿಚಾರಣೆ ಆರಂಭವಾಗಿದೆ. ಒಂದು ಗಂಟೆ ನಂತರ ಸ್ಪಷ್ಟ ಆದೇಶ ಹೊರಬರುವ ಸಾಧ್ಯತೆ ಇದೆ.