ಲೋಕಸಭಾ ಚುನಾವಣೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿ : ಯಾರಿಗೆ ಯಾವ ಕ್ಷೇತ್ರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 7:47 AM IST
Congress And  JDS Fight Together In LokSabha Election
Highlights

ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್  - ಜೆಡಿಎಸ್ ನಡುವೆ ಮೈತ್ರಿ ಖಚಿತವಾಗಿದ್ದು ಇದೀಗ ಕ್ಷೇತ್ರ ಹಂಚಿಕೆಯ ವಿಚಾರದ ಬಗ್ಗೆ ಚರ್ಚೆ ಆರಂಭವಾಗಿದೆ. 

ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರೆಸಲು ನಿರ್ಧರಿಸಿರುವ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿಯೇ ನಡೆವ ಸಾಧ್ಯತೆಯಿದೆ. 

ಅದಕ್ಕೆ ಕಾರಣ- ತನ್ನ ಪ್ರಾಬಲ್ಯವಿರುವ ಮೈಸೂರು ಭಾಗದಲ್ಲೇ ಹೆಚ್ಚಿನ ಸ್ಥಾನಗಳನ್ನು ನೀಡುವಂತೆ ಪಟ್ಟು ಹಿಡಿಯಲು ಜೆಡಿಎಸ್ ನಿರ್ಧರಿ ಸಿರುವುದು. ಇದುವರೆಗೆ ಸ್ಥಾನ ಹೊಂದಾಣಿಕೆಯ ಬಗ್ಗೆ ಉಭಯ ಪಕ್ಷಗಳ ನಡುವೆ ಯಾವುದೇ ರೀತಿಯ ಗಂಭೀರ ಚರ್ಚೆಗಳು ನಡೆಯದೇ ಇದ್ದರೂ ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗದ ಮುಂಚೂಣಿಯಲ್ಲಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಜೆಡಿಎಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಸ್ಥಾನ ಎರಡು. ಈ ಬಾರಿ ಅದಕ್ಕಿಂತ ಹೆಚ್ಚು ಸ್ಥಾನ ಗಳಿಸುವ ಅವಕಾಶ ಏನಾದರೂ ಇದ್ದರೆ ಅದು ಹಳೆ ಮೈಸೂರು ಭಾಗದಲ್ಲಿ ಮಾತ್ರ. 

ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರಾಬಲ್ಯ ಮತ್ತು ಪ್ರಭಾವ ಹೆಚ್ಚಿಸಿಕೊಳ್ಳುವ ಸಂಬಂಧ ಕನಿಷ್ಠ 5 ಅಥವಾ 6 ಸ್ಥಾನಗಳನ್ನಾದರೂ ಕರ್ನಾಟಕದಲ್ಲಿ ಗೆಲ್ಲಬೇಕು ಎಂಬ ಲೆಕ್ಕಾಚಾರವನ್ನು ಗೌಡರು ಹೊಂದಿದ್ದಾರೆ. ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂಬ ನಿಲುವನ್ನು ಹೊಂದಿರುವ ಜೆಡಿಎಸ್ ನಾಯಕರು, ಚೌಕಾಶಿ ನಡೆದು ತಾವು ಕೇಳುವ ಕ್ಷೇತ್ರಗಳನ್ನೇ ನೀಡಲು ಕಾಂಗ್ರೆ ಸ್
ಸಮ್ಮತಿಸಿದಲ್ಲಿ ಒಂದು ಅಥವಾ 2 ಕ್ಷೇತ್ರಗಳು ಕಡಿಮೆಯಾದರೂ ಒಪ್ಪಿಕೊಳ್ಳುವ ಮನಸ್ಥಿತಿಯ ಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಕಾಂಗ್ರೆಸ್ ನಾಯಕರು ಏನೇ ಹೇಳಲಿ, ಯಾವ ಕ್ಷೇತ್ರಗಳು ಯಾರಿಗೆ ಎಂಬು ದರ ತೀರ್ಮಾನ ಆಗುವುದು ದೆಹಲಿ ಮಟ್ಟ ದಲ್ಲಿ. ಕಾಂಗ್ರೆಸ್ ವರಿಷ್ಠರ ಜೊತೆಗೆ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾತು ಜೆಡಿಎಸ್ ಪಾಳೆಯದಿಂದ ಬಲವಾಗಿ ಕೇಳಿಬಂದಿದೆ. ಹಳೆ ಮೈಸೂರು ಭಾಗದ ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಚಿಕ್ಕಬ ಳ್ಳಾಪುರ, ತುಮಕೂರು ಕ್ಷೇತ್ರಗಳ ಜೊತೆಗೆ ಮಧ್ಯ ಕರ್ನಾಟಕದ ಶಿವಮೊಗ್ಗ, ಮುಂಬೈ ಕರ್ನಾಟಕದ ವಿಜಯಪುರ, ಹೈದ್ರಾಬಾದ್ ಕರ್ನಾಟಕದ ರಾಯಚೂರು ಹಾಗೂ ಬೀದರ್ ಕ್ಷೇತ್ರಗಳನ್ನೂ ತಾವು ಸ್ಪರ್ಧಿಸಬಹುದಾದ ಪಟ್ಟಿಯಲ್ಲಿ ಜೆಡಿಎಸ್ ನಾಯಕರು ಇಟ್ಟುಕೊಂಡಿದ್ದಾರೆ. ಈ ಪೈಕಿ ಅವರ ಆದ್ಯತೆ ಹಳೆ ಮೈಸೂರು ಭಾಗದ ಆರು ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಇರಲಿದೆ.

ಜೆಡಿಎಸ್ ಬಯಸಿರುವ ತುಮಕೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಹಾಲಿ ಕಾಂಗ್ರೆಸ್ ಸದಸ್ಯರಿದ್ದಾರೆ. ಅವುಗಳನ್ನು ಬಿಟ್ಟು ಕೊಡಲು ಕಾಂಗ್ರೆಸ್ ಒಪ್ಪುವ ಸಾಧ್ಯತೆ ತೀರಾ ಕಡಿಮೆ. ಆದರೆ, ಸಂಸತ್ತಿನಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ನೀಡಲು ಹೆಚ್ಚು ಸ್ಥಾನಗಳು ಬೇಕು ಎಂದಾದರೆ ತಾವು ಕೇಳಿದ ಕ್ಷೇತ್ರಗಳನ್ನು ಬಿಟ್ಟುಕೊಡುವುದು ಕಾಂಗ್ರೆಸ್‌ಗೆ ಅನಿವಾರ್ಯ ಎಂಬ ಯೋಚನೆಯಲ್ಲಿ ದೇವೇಗೌಡರಿದ್ದಾರೆ. ಇಲ್ಲದಿದ್ದರೆ ನಿರೀಕ್ಷಿತ ಸಂಖ್ಯಾ ಬಲ ಪಡೆಯಲು ಅಡ್ಡಿಯಾಗುತ್ತದೆ. 

ಒಂದು ವೇಳೆ ಹೊಂದಾಣಿಕೆ ವಿಫಲವಾಗಿ ಉಭಯ ಪಕ್ಷಗಳೂ ಸ್ವತಂತ್ರವಾಗಿ ಸ್ಪರ್ಧಿಸಿದಲ್ಲಿ ಆಗ ಬಿಜೆಪಿಗೆ ಹೆಚ್ಚು ಅನುಕೂಲ ವಾಗುತ್ತದೆ ಎಂಬ ವಾದವನ್ನು ಜೆಡಿಎಸ್ ನಾ ಯಕರು ಮಂಡಿಸುತ್ತಿದ್ದಾರೆ.

ವಿಜಯ್ ಮಲಗಿಹಾಳ

loader