ಪ್ರಧಾನಿ ನರೇಂದ್ರ ಮೋದಿ ಸೇರಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಿಜೆಪಿಯ 17 ಸಂಸದರ ಭಾವಚಿತ್ರಗಳಿಗೆ ಅಭಿನಂದಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯ್ತು. ಕಾವೇರಿ ವಿಚಾರದಲ್ಲಿ ಕರ್ನಾಟಕ ಕ್ಕೆ ಅನ್ಯಾಯವಾದರೂ ಆ ಬಗ್ಗೆ ಮನವಿ ಆಲಿಸಲು ಪ್ರಧಾನಿಯವರಿಗೆ ಪುರುಸೊತ್ತಿಲ್ಲ.

ಮೈಸೂರು(ಜ.22): ಜಲ್ಲಿಕಟ್ಟು ಪರವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದನ್ನು ವಿರೋಧಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ಪ್ರಧಾನಿ ನರೇಂದ್ರ ಮೋದಿ ಸೇರಿ ಕರ್ನಾಟಕದಿಂದ ಆಯ್ಕೆಯಾಗಿರುವ ಬಿಜೆಪಿಯ 17 ಸಂಸದರ ಭಾವಚಿತ್ರಗಳಿಗೆ ಅಭಿನಂದಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯ್ತು. ಕಾವೇರಿ ವಿಚಾರದಲ್ಲಿ ಕರ್ನಾಟಕ ಕ್ಕೆ ಅನ್ಯಾಯವಾದರೂ ಆ ಬಗ್ಗೆ ಮನವಿ ಆಲಿಸಲು ಪ್ರಧಾನಿಯವರಿಗೆ ಪುರುಸೊತ್ತಿಲ್ಲ. ಇತ್ತ ಪ್ರಧಾನಿಯನ್ನ ಪ್ರಶ್ನಿಸಲು ರಾಜ್ಯದ ಸಂಸದರಿಗೆ ಧೈರ್ಯವಿಲ್ಲವೇ ಅಂತಾ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ರು. ಜಲ್ಲಿಕಟ್ಟು ಮೋಜಿನ ಕ್ರೀಡೆಗೆ ಅವಕಾಶ ಕೊಟ್ಟ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಅಂತಾ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವ್ಯಕ್ತಪಡಿಸಿದರು.