ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಏನಿರಲಿದೆ..?

First Published 28, Jan 2018, 12:09 PM IST
Congres Election Manifesto News
Highlights

ಗುಜರಾತ್‌ನಲ್ಲಿ ಇತ್ತೀಚೆಗೆ ಮಾಡಿದಂತೆ ಕರ್ನಾಟಕದಲ್ಲೂ ಜನರ ತಲುಪುವ ಪ್ರಚಾರ ಕಾರ್ಯಕ್ರಮಗಳನ್ನು ರಾಜ್ಯ ಕಾಂಗ್ರೆಸ್ ಮುಖಂಡರು ಹಮ್ಮಿಕೊಳ್ಳಬೇಕು ಹಾಗೂ ‘ಜನತಾ ಪ್ರಣಾಳಿಕೆ’ ರಚಿಸಬೇಕು ಎಂದು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಸೂಚಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸಹ ಉಸ್ತುವಾರಿ ಮಧು ಯಕ್ಷಿ ಗೌಡ್ ಹೇಳಿದರು.

ನವದೆಹಲಿ: ಗುಜರಾತ್‌ನಲ್ಲಿ ಇತ್ತೀಚೆಗೆ ಮಾಡಿದಂತೆ ಕರ್ನಾಟಕದಲ್ಲೂ ಜನರ ತಲುಪುವ ಪ್ರಚಾರ ಕಾರ್ಯಕ್ರಮಗಳನ್ನು ರಾಜ್ಯ ಕಾಂಗ್ರೆಸ್ ಮುಖಂಡರು ಹಮ್ಮಿಕೊಳ್ಳಬೇಕು ಹಾಗೂ ‘ಜನತಾ ಪ್ರಣಾಳಿಕೆ’ ರಚಿಸಬೇಕು ಎಂದು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಸೂಚಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸಹ ಉಸ್ತುವಾರಿ ಮಧು ಯಕ್ಷಿ ಗೌಡ್ ಹೇಳಿದರು.

ಶನಿವಾರ ಪಿಟಿಐ ಸುದ್ದಿಸಂಸ್ಥೆಯ ಜತೆ ಮಾತನಾಡಿದ ಅವರು, ‘ಜನರಿಗೆ ಏನು ಬೇಕು ಎಂಬ ಅಂಶಗಳನ್ನು ಉಳ್ಳ ಪ್ರಣಾಳಿಕೆ ಸಿದ್ಧಗೊಳ್ಳಬೇಕು ಎಂದು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೂಚಿಸಿದ್ದಾರೆ. ಎಲ್ಲ ವರ್ಗಗಳ ಜನರಿಂದ ಕಾಂಗ್ರೆಸ್ ಪಕ್ಷ ಅಭಿಪ್ರಾಯ ಆಲಿಸಲಿದೆ’ ಎಂದು ತಿಳಿಸಿದರು.

‘ಕಚೇರಿಗಳಲ್ಲಿ ಕುಳಿತು ಪ್ರಣಾಳಿಕೆ ಸಿದ್ಧಪಡಿಸುವುದಲ್ಲ. ಇದರ ಬದಲು ಜನರ ನಡುವೆ ಹೋಗಿ ಅವರ ಬೇಕು ಬೇಡಗಳನ್ನು ಅರಿತು ಸಿದ್ಧಪಡಿಸಬೇಕು. ಗುಜರಾತ್‌ನಲ್ಲಿ ಇಂಥದ್ದೇ ಒಂದು ಪ್ರಯತ್ನ ನಡೆಯಿತು. ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಅವರು ನಿವಾಸಿಗಳೊಂದಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿದರು. ಇದು ಯಶ ಕಂಡಿತ್ತು’ ಎಂದರು.

loader