ಹೆಚ್ಡಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಬೇಸರ : ಕೆಲವೇ ಕ್ಷಣಗಳಲ್ಲಿ ಮಹತ್ವದ ಸಭೆ

First Published 29, Jun 2018, 7:23 PM IST
Cong leaders urges to CMP Meeting  demand the continuation of previous governments schemes
Highlights
  • ಆರ್ಥಿಕ ಸಂಪನ್ಮೂಲ ಕಾರಣವೊಡ್ಡಿ ಹೆಚ್ಡಿಕೆ ಕೈ ಕಾರ್ಯಕ್ರಮಗಳಿಗೆ ತಡೆ
  • ಮತಗಳಿಕೆಯ ಕಾರ್ಯಕ್ರಮಗಳ ಪಟ್ಟಿ ಮಾಡಲು ಕಾಂಗ್ರೆಸ್ ನಾಯಕರ ತುರ್ತು ಸಭೆ 

ಬೆಂಗಳೂರು[ಜೂ.29]: ಕಾಂಗ್ರೆಸ್ ಪ್ರಣಾಳಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಲು ಮುಖ್ಯಮಂತ್ರಿ  ಕುಮಾರಸ್ವಾಮಿ ಹಿಂದೇಟು ಹಾಕಿರುವ ಕಾರಣ ಕೈನ ಪ್ರಮುಖ ನಾಯಕರು ಸಿಟ್ಟಾಗಿದ್ದಾರೆ.

ಆರ್ಥಿಕ ಸಂಪನ್ಮೂಲ ಕಾರಣವೊಡ್ಡಿ ಹೆಚ್ಡಿಕೆ ಕೈ ಕಾರ್ಯಕ್ರಮಗಳಿಗೆ ತಡೆಯೊಡ್ಡಿದ್ದಾರೆ. ಸಿಎಂ ಅವರ ಕಡೆಯಿಂದ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಹಠಕ್ಕೆ ಬಿದ್ದಿದ್ದಾರೆ.

ಕುಮಾರಸ್ವಾಮಿ ನಿರ್ಧಾರ ಬೇಸರಗೊಂಡಿರುವ ವೇಣುಗೋಪಾಲ ಸಹಿತ ಪ್ರಮುಖ ನಾಯಕರು ಮತಗಳಿಕೆಯ ಕಾರ್ಯಕ್ರಮಗಳ ಪಟ್ಟಿ ಮಾಡಲು ಮುಂದಾಗಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಕೆಲವೇ ಕ್ಷಣಗಳಲ್ಲಿ ಸಭೆ ಆರಂಭವಾಗಲಿದ್ದು ಜಾರಿಗೊಳಿಸಲೇ ಬೇಕಾದ ಭಾಗ್ಯ ಯೋಜನೆಗಳ ಪಟ್ಟಿ ಇಂದಿನ ಸಭೆಯಲ್ಲಿ ಸಿದ್ಧಗೊಳಿಸಲಿದ್ದಾರೆ. ಸಭೆಯಲ್ಲಿ ತಯಾರುಗೊಂಡ ಪಟ್ಟಿಯನ್ನು ಸಿಎಂಗೆ ಕಳುಹಿಸುವ ತೀರ್ಮಾನವನ್ನು ಮುಖಂಡರು ಮಾಡಲಿದ್ದಾರೆ ಎನ್ನಲಾಗಿದೆ.

loader