ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕಾಂಡೋಮ್ ಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆದುಕೊಳ್ಳಲಾಗಿದೆ. ಆಂತರಿಕ ಪರೀಕ್ಷೆಯ ವೇಳೆ ಹಲವು ಕಾಂಡೋಮ್‌ಗಳು ಅಂತಾರಾಷ್ಟ್ರೀಯ ಗುಣಮಟ್ಟಹೊಂದಿರದೇ ಇದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಕಾರು ತಯಾರಿಕಾ ಕಂಪನಿಗಳು ದೋಷಪೂರಿತ ಕಾರುಗಳನ್ನು ವಾಪಸ್‌ ಪಡೆಯುವುದನ್ನು ನೋಡಿದ್ದೇವೆ. ಆದರೆ, ಇಂಥದ್ದೊಂದು ಸಂದರ್ಭ ಇದೀಗ ಕಾಂಡೋಮ್‌ ಕಂಪನಿಗೂ ಬಂದೊದಗಿದೆ. 

ಬಾಳಿಕೆ ಪರೀಕ್ಷೆಯಲ್ಲಿ ವಿಫಲವಾದ ಕಾರಣಕ್ಕಾಗಿ ಕಾಂಡೋಮ್‌ ತಯಾರಿಕಾ ಕಂಪನಿ ಮೂರು ಬ್ಯಾಚ್‌ಗಳಲ್ಲಿ ಕಳುಹಿಸಿದ್ದ ಡ್ಯೂರೆಕ್ಸ್‌ ರಿಯಲ್‌ ಫೀಲ್‌ ಕಾಂಡೋಮ್‌ಗಳನ್ನು ವಾಪಸ್‌ ಪಡೆದುಕೊಂಡಿದೆ. 

ಆಂತರಿಕ ಪರೀಕ್ಷೆಯ ವೇಳೆ ಹಲವು ಕಾಂಡೋಮ್‌ಗಳು ಅಂತಾರಾಷ್ಟ್ರೀಯ ಗುಣಮಟ್ಟಹೊಂದಿರದೇ ಇದ್ದ ಕಾರಣಕ್ಕಾಗಿ ಕಾಂಡೊಮ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಇದೇ ವೇಳೆ ಸುರಕ್ಷತೆಯ ಬಗ್ಗೆ ಗ್ರಾಹಕರು ಚಿಂತಿಸಬೇಕಾಗಿಲ್ಲ ಎಂದು ಕಂಪನಿ ಭರವಸೆ ನೀಡಿದೆ. ಅಷ್ಟೂಅನುಮಾನ ಇದ್ದರೆ ಅವುಗಳನ್ನು ಅಂಗಡಿಗೆ ವಾಪಸ್‌ ನೀಡುವಂತೆಯೂ ತಿಳಿಸಿದೆ.