ವಾಷಿಂಗ್ಟನ್[ಜೂ.16]: ಮನುಷ್ಯರು ನಿಧನ ಹೊಂದಿದಾಗ ವಿಧಿವತ್ತಾಗಿ ಅಂತ್ಯಸಂಸ್ಕಾರ ನೆರವೇರಿಸುವುದು ವಿಶ್ವದೆಲ್ಲೆಡೆ ಇರುವ ವಾಡಿಕೆ. ಆದರೆ, ವಾಷಿಂಗ್ಟನ್‌ನಲ್ಲಿ ಮನುಷ್ಯ ದೇಹವವನ್ನು ಹೂಳುವ ಇಲ್ಲವೇ ಸುಡುವ ಬದಲು ಅದನ್ನು ನೈಸರ್ಗಿಕ ಗೊಬ್ಬರವನ್ನಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಲಾಗಿದೆ.

ಜಾನುವಾರುಗಳು ಸತ್ತಾಗ ರೈತರು ಅವುಗಳನ್ನು ಹೊಲದಲ್ಲಿ ಹೂಳಿ ಗೊಬ್ಬರವಾಗಿ ಪರಿವರ್ತಿಸುತ್ತಾರೆ. ಅದೇ ರೀತಿ, ಮನುಷ್ಯರ ದೇಹವನ್ನು ಕಟ್ಟಿಗೆ, ಹುಲ್ಲು, ಮಣ್ಣಿನ ಜೊತೆ ಬೆರೆಸಿ ಗೊಬ್ಬರವನ್ನಾಗಿ ಪರಿವರ್ತಿಸುವುದಕ್ಕೆ ಅವಕಾಶ ನೀಡುವ ಕಾನೂನಿಗೆ ವಾಷಿಂಗ್ಟನ್‌ ಗವರ್ನರ್‌ ಸಹಿ ಹಾಕಿದ್ದಾರೆ.

ಈ ಮೂಲಕ ವಾಷಿಂಗ್ಟನ್‌ ಇಂಥದ್ದೊಂದು ಕಾನೂನು ರೂಪಿಸಿದ ಅಮೆರಿಕದ ಮೊದಲ ರಾಜ್ಯ ಎನಿಸಿಕೊಂಡಿದೆ. ಇದರ ಲಾಭ ಪಡೆಯುವ ನಿಟ್ಟಿನಿಂದ ಕತ್ರೀನಾ ಸ್ಪೇಡ್‌ ಎಂಬಾತ ರಿಕಂಪೋಸ್‌ ಲೈಫ್‌ ಎಂಬ ಕಂಪನಿಯನ್ನು ಆರಂಭಿಸಿದ್ದಾನಂತೆ.