ಬ್ಯಾಂಕಿಗೆ ಹೋಗುವ ಮುನ್ನ ಯಾವುದಾದರೂ ಗುರುತು ಪತ್ರ ತೆಗೆದುಕೊಂಡು ಹೋಗಿ, ಆಧಾರ್, ಪಾನ್ ಕಾರ್ಡ್, ಚಾಲನಾ ಪತ್ರ, ವೋಟರ್ ಕಾರ್ಡ್, ಪಾಸ್ ಪೋರ್ಟ್ ಪೈಕಿ ಒಂದು ತೋರಿಸಬೇಕು. 

ಬೆಂಗಳೂರು(ನ.10): ಇವತ್ತಿಂದ ಬ್ಯಾಂಕುಗಲ್ಲಿ ಹಳೆಯ ಐನೂರು, ಸಾವಿರ ನೋಟುಗಳನ್ನು ಕೊಟ್ಟು ನೂರು ರೂ ನೋಟುಗಳ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ನಾಗರೀಕರೆಲ್ಲರು ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದು, ನೀವು ಸಹ ಬ್ಯಾಂಕಿಗೆ ಹೋಗುವ ಪ್ಲಾನ್ ಮಾಡಿದ್ರೆ ಈ ಸ್ಟೋರಿ ನೋಡಿ. 

500, 1000 ರೂ ಹಳೆಯ ನೋಟುಗಳೊಂದಿಗೆ ಬ್ಯಾಂಕುಗಳಲ್ಲಿ ಗ್ರಾಹಕರು ಸರತಿ ಸಾಲುಗಟ್ಟಿದ್ದಾರೆ. ಆದರೆ ನೋಟುಗಳ ಬದಲಾವಣೆಗೆ ಪ್ರತ್ಯೇಕ ಅರ್ಜಿಗಳಲ್ಲಿ ಅಗತ್ಯ ಮಾಹಿತಿ ತುಂಬಿಕೊಡಬೇಕು. ಅರ್ಜಿಗಳನ್ನು ಬ್ಯಾಂಕುಗಳಲ್ಲೇ ವಿತರಿಸಲಾಗುತ್ತಿದೆ. 

ಬ್ಯಾಂಕಿಗೆ ಹೋಗುವ ಮುನ್ನ ಯಾವುದಾದರೂ ಗುರುತು ಪತ್ರ ತೆಗೆದುಕೊಂಡು ಹೋಗಿ, ಆಧಾರ್, ಪಾನ್ ಕಾರ್ಡ್, ಚಾಲನಾ ಪತ್ರ, ವೋಟರ್ ಕಾರ್ಡ್, ಪಾಸ್ ಪೋರ್ಟ್ ಪೈಕಿ ಒಂದು ತೋರಿಸಬೇಕು. 

ಅಲ್ಲದೇ ಅರ್ಜಿಯಲ್ಲಿ ನೀವು ಹಣವನ್ನು ಪಡೆಯುತ್ತಿರುವ ಬ್ಯಾಂಕಿನ ವಿವರವನ್ನು ದಾಖಲಿಸಿ, ನಿಮ್ಮ ವಿವರವನ್ನು ತುಂಬ ಬೇಕು, ನಿಮ್ಮ ಗುರುತಿನ ಪತ್ರದ ಸಂಖ್ಯೆ, ನಿಮ್ಮ ಹೆಸರು ಮತ್ತು ನೀವು ಬದಲಾಯಿಸುವ ಹಣದ ಮೊತ್ತ ಮತ್ತು ನೀವು ಬ್ಯಾಂಕಿಗೆ ಜಮಾ ಮಾಡುತ್ತಿರುವ 500 ಮತ್ತು 1000 ರೂ ಗಳ ನೋಟ ಸಂಖ್ಯೆಯನ್ನು ದಾಖಲಿಸ ಬೇಕಾಗಿದೆ. 

ಪ್ರತೀ ಗ್ರಾಹಕ 4000 ರೂ ವರಗೆ 500, 1000 ರೂ ಕೊಟ್ಟು 100 ರೂಗಳ ನೋಟುಗಳನ್ನು ಪಡೆಯಬೇಕು. ಯಾರು ಯಾವ ಬ್ಯಾಂಕುಗಳಲ್ಲಿ ಬೇಕಾದ್ರು ಅರ್ಜಿ ತುಂಬಿಸಿ ನೂರರ ನೋಟುಗಳನ್ನು ಪಡೆದುಕೊಳ್ಳ ಬೇಕು.