ದುನಿಯಾ ವಿಜಿ ವಿರುದ್ಧ ದಾಖಲಾಗಿರೋ ಐಪಿಸಿ ಸೆಕ್ಷನ್​​ಗಳು ಯಾವವು?  ಈ ಪ್ರಕರಣಗಳು ಸಾಬೀತಾದ್ರೆ ಯಾವ ಶಿಕ್ಷೆಗೆ ಒಳಗಾಗಲಿದ್ದಾರೆ ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು, [ಸೆ. 23]: ಸ್ಯಾಂಡಲ್ ವುಡ್ ನಟ ದುನಿಯಾ ವಿಜಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.

ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ, ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಡಿ ನಟ ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ. 

ಇದನ್ನು ಓದಿ: ಇಂದು ದುನಿಯಾ ವಿಜಿಗೆ ಪರಪ್ಪನ ಆಗ್ರಹಾರ ಜೈಲ್ ಗತಿ

"

 ಇಂದು ಭಾನುವಾರ ಆಗಿದ್ರಿಂದ ದುನಿಯಾ ವಿಜಿ ಪರಪ್ಪನ ಆಗ್ರಹಾರ ಜೈಲು ಸೇರುವುದು ಗ್ಯಾರಂಟಿಯಾಗಿದೆ. ಹಾಗಾದ್ರೆ ದುನಿಯಾ ವಿಜಿ ವಿರುದ್ಧ ದಾಖಲಾಗಿರೋ ಐಪಿಸಿ ಸೆಕ್ಷನ್​​ಗಳು ಯಾವವು? ಈ ಪ್ರಕರಣಗಳು ಸಾಬೀತಾದ್ರೆ ಯಾವ ಶಿಕ್ಷೆಗೆ ಒಳಗಾಗಲಿದ್ದಾರೆ ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಕೇಸ್​​ಗಳ ವಿವರ..!
*ಸೆಕ್ಷನ್​ 363: ಕಿಡ್ನಾಪ್​ ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ ಜೊತೆಗೆ ದಂಡ .
*ಸೆಕ್ಷನ್​ 323: ಸಾಮೂಹಿಕ ಹಲ್ಲೆಗೆ ಶಿಕ್ಷೆ, ಗರಿಷ್ಠ ಒಂದು ವರ್ಷ ಜೈಲು, ಒಂದು ಸಾವಿರ ದಂಡ.
*ಸೆಕ್ಷನ್​ 506: ಕೊಲೆ ಬೆದರಿಕೆ ಮತ್ತು ಅಪಹರಣ, ಜಾಮೀನು ರಹಿತ ಕೇಸ್​​ .