ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಆರೋಪ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ಸಲ್ಲಿಕೆಯಾಗಿದೆ. ಧಾರವಾಡ ಎಸ್ಪಿ ಜಿ.ಸಂಗೀತಾ ಅವರಿಗೆ ಯೋಗೀಶ್ ಗೌಡ ಸೋದರ ದೂರು ನೀಡಿದ್ದಾರೆ.
ಬೆಂಗಳೂರು (ನ.29): ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಆರೋಪ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ಸಲ್ಲಿಕೆಯಾಗಿದೆ. ಧಾರವಾಡ ಎಸ್ಪಿ ಜಿ.ಸಂಗೀತಾ ಅವರಿಗೆ ಯೋಗೀಶ್ ಗೌಡ ಸೋದರ ದೂರು ನೀಡಿದ್ದಾರೆ.
ಸಚಿವರ ವಿರುದ್ಧ ಪ್ರಭಾವ ಬೀರುವ ಪ್ರಯತ್ನ, ಸಾಕ್ಷ್ಯ ನಾಶ ಯತ್ನ ಆರೋಪ, ಕೊಲೆ ರಾಜಿ ಸಂಧಾನಕ್ಕೆ ಯತ್ನಿಸಿದ ಆರೋಪದಲ್ಲಿ ಹಲವರ ವಿರುದ್ಧ ದೂರು ದಾಖಲಾಗಿದೆ. ಸಂಧಾನ ನಡೆಸಿದ್ದ ಬೆಳಗಾವಿ ಐಜಿಪಿ ಕಚೇರಿಯಲ್ಲಿನ ಡಿವೈಎಸ್ಪಿ ತುಳಜಪ್ಪ ಸುಲ್ಫಿ, ಧಾರವಾಡ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ಮತ್ತು ಮಹೇಶ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.
ಕಳೆದ ಗುರುವಾರ "ಮಿನಿಸ್ಟರ್ ಮತ್ತು ಮರ್ಡರ್..!" ಮೆಗಾ ಎಕ್ಸ್;ಕ್ಲೂಸಿವ್ ಆಡಿಯೋ, ವಿಡಿಯೋ ಸಾಕ್ಷಿ ಸಹಿತ ಸುವರ್ಣ ನ್ಯೂಸ್ ಬಹಿರಂಗಪಡಿಸಿತ್ತು. ಇದು ವಿಧಾನಸಭೆ, ವಿಧಾನ ಪರಿಷತ್'ನಲ್ಲಿ ಪ್ರತಿಧ್ವನಿಸಿತ್ತು.
