Asianet Suvarna News Asianet Suvarna News

ರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ: ದ್ವಾರಕನಾಥ್ ವಿರುದ್ಧ ದೂರು

ಶ್ರೀರಾಮನ ವಿರುದ್ಧ ವಿವಾದಾತ್ಮಕವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ  ಸಿ.ಎಸ್  ದ್ವಾರಕಾನಾಥ್ ವಿರುದ್ಧ ಹಿಂದೂ ಮುಖಂಡ ಗಣೇಶ್ ಶೆಟ್ಟಿ ಕಲ್ಲಡ್ಕ  ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಸಿ.ಎಸ್. ದ್ವಾರಕ್ ನಾಥ್ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.  

Complaint Filed Agaisnt C S Dwarakanath

ಮಂಗಳೂರು (ಡಿ.12):  ಶ್ರೀರಾಮನ ವಿರುದ್ಧ ವಿವಾದಾತ್ಮಕವಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ  ಸಿ.ಎಸ್  ದ್ವಾರಕಾನಾಥ್ ವಿರುದ್ಧ ಹಿಂದೂ ಮುಖಂಡ ಗಣೇಶ್ ಶೆಟ್ಟಿ ಕಲ್ಲಡ್ಕ  ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಸಿ.ಎಸ್. ದ್ವಾರಕ್ ನಾಥ್ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.  

ಶ್ರೀರಾಮನ ಅಸ್ಥಿತ್ವಕ್ಕೆ ಸರಿಯಾದ ಸ್ಪಷ್ಟತೆಯಿಲ್ಲ.  ನಮ್ಮ ಮುತ್ತಜ್ಜರ ಹೆಸರೇ ನೆನಪಿರುವುದಿಲ್ಲ.  9 ಲಕ್ಷ ವರ್ಷದ ಹಿಂದಿನ‌ ವ್ಯಕ್ತಿಯ ಬಗ್ಗೆ ಮಾತನಾಡುವ ಬಗ್ಗೆ ಏನು ಹೇಳಬೇಕೆಂದು ಅರ್ಥವಾಗುತ್ತಿಲ್ಲ.  ಇತಿಹಾಸದಲ್ಲಿ ಮೂವರು ಮಹಾತ್ಮರ ಸೃಷ್ಟಿಗೆ ದಾಖಲೆ ಮತ್ತು ಪುರಾವೆಗಳಿವೆ.  ದಾಖಲಾತಿಗಳ ಪ್ರಕಾರ ಬುದ್ಧ, ಕ್ರಿಸ್ತ, ಪೈಗಂಬರ್ ಅಸ್ತಿತ್ವಕ್ಕೆ ಪುರಾವೆಯಿದೆ.  ಇವರನ್ನು ಹೊರತುಪಡಿಸಿ ಇನ್ಯಾವ ದಾಖಲಾತಿಗಳು ಸಿಕ್ಕಿಲ್ಲ.  ಆದರೆ,ಯಾವ ರೀತಿಯಲ್ಲಿ ಸುಳ್ಳುಗಳನ್ನು ಹಬ್ಬಿಸುತ್ತಾ ಹೋಗುತ್ತಿದ್ದಾರೆಂಬುದು ಆಶ್ಚರ್ಯಕರ ವಿಷಯ ಎಂದು ನಿನ್ನೆ ಮಂಗಳೂರು ಪುರಭವನದಲ್ಲಿ ನಡೆದ  ಬಾಬರಿ ಮಸೀದಿ ಧ್ವಂಸ ಕುರಿತ ವಿಚಾರ ಸಂಕಿರಣದಲ್ಲಿ  ದ್ವಾರಕ್ ನಾಥ್ ಹೇಳಿದ್ದರು. ಇವರ ಈ ಹೇಳಿಕೆ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ದ್ವಾರಕಾನಾಥ್ ವಿವಾದಾತ್ಮಕ ಹೇಳಿಕೆಗೆ  ಪೇಜಾವರ ಶ್ರೀಗಳು  ತಿರುಗೇಟು ನೀಡಿದ್ದಾರೆ.

ಜನರಿಗೆ ರಾಮನ ಬಗ್ಗೆ ನಂಬಿಕೆಯಿದೆ.  ಜನರ ನಂಬಿಕೆ ಅಲುಗಾಡಿಸುವ ಪ್ರಯತ್ನ ಬೇಡ.  ಅನ್ಯ ಧರ್ಮೀಯರ ಬಗ್ಗೆ ಹೀಗೆ ಹೇಳುತ್ತೀರಾ?  ಇಂತಹ ಹೇಳಿಕೆಗಳು ಅನಗತ್ಯ ಎಂದು ಉಡುಪಿಯಲ್ಲಿ ಪೇಜಾವರ ಶ್ರೀಗಳು  ಹೇಳಿಕೆ ನೀಡಿದ್ದಾರೆ.

 

 

Follow Us:
Download App:
  • android
  • ios