ಜೆಡಿಎಸ್‌ ಬಂಡಾಯ ಶಾಸಕರ ವಿರುದ್ಧ ದೂರು

First Published 7, Mar 2018, 8:59 AM IST
Complaint filed against JDS Rebel MLAs
Highlights

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರಿಗೆ ಮತದಾನ ಹಕ್ಕು ನೀಡಬಾರದು ಎಂದು ಜೆಡಿಯು ನಾಯಕ ಬಿ.ಎಸ್‌.ಗೌಡ ಅವರು ಚುನಾವಣಾ ಆಯೋಗ ಮತ್ತು ಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ.

ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಏಳು ಬಂಡಾಯ ಶಾಸಕರಿಗೆ ಮತದಾನ ಹಕ್ಕು ನೀಡಬಾರದು ಎಂದು ಜೆಡಿಯು ನಾಯಕ ಬಿ.ಎಸ್‌.ಗೌಡ ಅವರು ಚುನಾವಣಾ ಆಯೋಗ ಮತ್ತು ಸಭಾಧ್ಯಕ್ಷರಿಗೆ ದೂರು ನೀಡಿದ್ದಾರೆ.

ಜೆಡಿಎಸ್‌ ಪಕ್ಷದಿಂದ ಚುನಾಯಿತರಾದ ಏಳು ಶಾಸಕರು ಈ ಹಿಂದೆ ಪಕ್ಷದ ವಿಪ್‌ ಉಲ್ಲಂಘನೆ ಮಾಡಿ ರಾಜ್ಯಸಭೆ ಚುನಾವಣೆಗೆ ಅಡ್ಡ ಮತದಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಏಳು ಶಾಸಕರನ್ನು ಅಮಾನತು ಮಾಡಿ ಅವರ ವಿರುದ್ಧ ಕ್ರಮ ಕೈಗೊಂಡು ಅವರ ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ವಿಪ್‌ ಉಲ್ಲಂಘನೆ ಮಾಡಿದಾಗ ಜೆಡಿಎಸ್‌ ವತಿಯಿಂದ ದೂರು ನೀಡಲಾಗಿತ್ತು. ಆದರೆ, ಒಂದು ವರ್ಷವಾದರೂ ವಿಪ್‌ ಉಲ್ಲಂಘನೆ ಮಾಡಿದ ಸದಸ್ಯರ ವಿರುದ್ಧ ವಿಧಾನಸಭಾಧ್ಯಕ್ಷರು ಯಾವುದೇ ಕ್ರಮ ಕೈಗೊಂಡಿಲ್ಲ. ಜೆಡಿಎಸ್‌ನಿಂದ ಏಳು ಶಾಸಕರನ್ನು ಅಮಾನತು ಮಾಡಲಾಗಿದೆ. ಹೀಗಾಗಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮೂರು ತಿಂಗಳೊಳಗೆ ಇಂತಹ ವಿಷಯವನ್ನು ಇತ್ಯರ್ಥಗೊಳಿಸಬೇಕು. ಆದರೆ, ಸಭಾಧ್ಯಕ್ಷರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಅಮಾನತುಗೊಂಡಿರುವ ಜೆಡಿಎಸ್‌ನ ಬಂಡಾಯ ಶಾಸಕರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಬಾರದು. ಒಂದು ವೇಳೆ ಮತದಾನದ ಹಕ್ಕನ್ನು ನೀಡಿದ್ದೇ ಆದರೆ ಅವರು ಯಾವ ಪಕ್ಷದ ಶಾಸಕರು ಎಂಬುದನ್ನು ತಿಳಿಸಬೇಕು ಎಂದು ಕೋರಿದ್ದಾರೆ.

loader