ಸ್ಟಾರ್ ಹೊಟೇಲ್ ಒಂದರ ಡಿಜೆ ಪಾರ್ಟಿಯ ವೇಳೆ ಅಭಿಮಾನಿಯನ್ನೇ ರಾಮ್ ಪಾಲ್ ಥಳಿಸಿದ್ದು, ಶೋಭಿತ್ ಎಂಬಾತನ ಮೇಲೆ ಕ್ಯಾಮೆರವನ್ನು ಎಸೆದು ಹಲ್ಲೆ ನಡೆಸಿದ್ದಾರೆ.

ನವದೆಹಲಿ (ಏ.09): ತನ್ನ ಫೋಟೊ ತೆಗೆದ ಎಂಬ ಕಾರಣಕ್ಕೆ ಅಭಿಮಾನಿಯನ್ನೇ ಥಳಿಸಿ, ಮತ್ತೊಂದು ವಿವಾದದಲ್ಲಿ ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ಸಿಲುಕಿಕೊಂಡಿದ್ದಾರೆ.

ಸ್ಟಾರ್ ಹೊಟೇಲ್ ಒಂದರ ಡಿಜೆ ಪಾರ್ಟಿಯ ವೇಳೆ ಅಭಿಮಾನಿಯನ್ನೇ ರಾಮ್ ಪಾಲ್ ಥಳಿಸಿದ್ದು, ಶೋಭಿತ್ ಎಂಬಾತನ ಮೇಲೆ ಕ್ಯಾಮೆರವನ್ನು ಎಸೆದು ಹಲ್ಲೆ ನಡೆಸಿದ್ದಾರೆ.

ದೆಹಲಿಯ ಪಂಚತಾರ ಹೊಟೇಲ್ ನಲ್ಲಿ ತಡ ರಾತ್ರಿ 3.30ರ ವೇಳೆ ಈ ಘಟನೆ ನಡೆದಿದೆ. ಆದರೆ ಈ ಬಗ್ಗೆ ಟ್ವೀಟ್ ಮಾಡಿರುವ ಶೋಬಿತ್, ರಾಮ್ ಪಾಲ್ ನನ್ನ ಮೇಲೆ ಏಕೆ ಕ್ಯಾಮೆರಾ ಎಸೆದರೊ ನನಗೆ ಗೊತ್ತಿಲ್ಲ. ಪೊಲೀಸರು ಕೂಡ ನನಗೆ ಯಾವ ರೀತಿಯೂ ಸಹಕರಿಸಿಲ್ಲ ಅಂತಾ ತಮ್ಮ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.