ಸತ್ಯಶೋಧ ಮಿತ್ರ ಮಂಡಳಿ ಹಾಗೂ ಕಾಂಗ್ರೆಸ್ ಮುಖಂಡ ಉಗ್ರಪ್ಪ ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಗಳನ್ನು ಗುಂಡಿಕ್ಕಿ ಕೊಲ್ಲುವುದಾಗಿ ಸಂದೇಶ ರವಾನೆಯಾಗುತ್ತಿದೆ.
ಬೆಂಗಳೂರು(ಡಿ.26): ರಾಘವೇಶ್ವರ ಶ್ರೀಗಳಿಗೆ ಜೀವ ಬೆದರಿಕೆ ಇದೆ ಎಂದು ರಾಮಚಂದ್ರಾಪುರ ಮಠದ ಭಕ್ತರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸತ್ಯಶೋಧ ಮಿತ್ರ ಮಂಡಳಿ ಹಾಗೂ ಕಾಂಗ್ರೆಸ್ ಮುಖಂಡ ಉಗ್ರಪ್ಪ ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಗಳನ್ನು ಗುಂಡಿಕ್ಕಿ ಕೊಲ್ಲುವುದಾಗಿ ಸಂದೇಶ ರವಾನೆಯಾಗುತ್ತಿದೆ.
ರವಿಕುಮಾರ್, ಗುಂಡೂರಾವ್ ಎಂಬುವರಿಂದ ಸಂದೇಶ ರವಾನೆಯಾಗಿದ್ದು, ಇದರಿಂದ ಮಠದ ವರ್ಚಸ್ಸಿಗೆ ದಕ್ಕೆಯಾಗಿದೆ. ಮುಂದಿನ ದಿನಗಳಲ್ಲಿ ಶ್ರೀಗಳಿಗೆ ಅಥವಾ ಭಕ್ತರಿಗೆ ತೊಂದರೆಯಾದಲ್ಲಿ ಉಗ್ರಪ್ಪ ಮತ್ತು ಸತ್ಯಶೋಧ ಮಿತ್ರ ಮಂಡಳಿ ಕಾರಣ. ಸತ್ಯಶೋಧ ಮಿತ್ರ ಮಂಡಳಿ ಶ್ರೀಗಳ ವಿರುದ್ಧ ಜನರನ್ನು ಪ್ರಚೋದಿಸುತ್ತಿದೆ ಈ ಕಾರಣದಿಂದ ವಿ.ಎಸ್. ಉಗ್ರಪ್ಪ, ಶಾಂತಾರಾಮ ಹೆಗಡೆ, ರವಿಕುಮಾರ್, ಗುಂಡೂರಾವ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ದಾಖಲಾಗಿದೆ.
