ಟಿಪಿಎಸ್ ಕಂಪನಿಯಿಂದ ಸುಮಾರು 14 ಕೋಟಿಯಷ್ಟು ಹಣವನ್ನು ಕಮಿಷನ್ ರೂಪದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಾರ್ಜ್ ಪಡೆದಿದ್ದಾರೆ ಎಂದು ಬಿಜೆಪಿ ಮುಖಂಡರೂ ಆದ ರಮೇಶ್ ಆರೋಪ ಮಾಡಿದ್ದಾರೆ.
ಬೆಂಗಳೂರು(ಆ. 29): ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಕ್ ಬ್ಯಾಕ್ ಪಡೆದ ಆರೋಪ ಮಾಡಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಮತ್ತು ಎಸಿಬಿಯಲ್ಲಿ ವಂಚನೆಯ ದೂರು ದಾಖಲಾಗಿದೆ. ಬಿಬಿಎಂಪಿ ಕಸ ಗುಡಿಸುವ ವಾಹನ ಮತ್ತು ಕಾಂಪ್ಯಾಕ್ಟರ್ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ. ಟಿಪಿಎಸ್ ಕಂಪನಿಯಿಂದ ಸುಮಾರು 14 ಕೋಟಿಯಷ್ಟು ಹಣವನ್ನು ಕಮಿಷನ್ ರೂಪದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಾರ್ಜ್ ಪಡೆದಿದ್ದಾರೆ ಎಂದು ಬಿಜೆಪಿ ಮುಖಂಡರೂ ಆದ ರಮೇಶ್ ಆರೋಪ ಮಾಡಿದ್ದಾರೆ.
ಈಗಾಗಲೇ ಟಿಪಿಎಸ್ ಕಂಪನಿಯಿಂದ ಖರೀದಿಸಿರುವ 25 ಕಾಂಪ್ಯಾಕ್ಟರ್, ಹಾಗೂ 9 ಕಸ ಗುಡಿಸುವ ವಾಹನಗಳು 2 ತಿಂಗಳಿಗೇ ಕೆಟ್ಟು ಹೋಗಿವೆ. ಸರ್ಕಾರ ಅತ್ಯಂತ ಕಳಪೆ ಗುಣಮಟ್ಟದ ವಾಹನಗಳನ್ನು ಖರೀದಿಸುವ ಮೂಲಕ ಸುಮಾರು 40 ಕೋಟಿ ರೂಪಾಯಿಗಳನ್ನು ಕಸದ ಪಾಲು ಮಾಡಿದೆ ಎಂದು ರಮೇಶ್ ಆರೋಪಿಸಿದ್ರು. ಇಂಥ ಕಳಪೆ ಗುಣಮಟ್ಟದ ವಾಹನಗಳನ್ನು ಪೂರೈಸಿರುವ ಟಿಪಿಎಸ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದೂ ಎನ್.ಆರ್. ರಮೇಶ್ ಇದೇ ವೇಳೆ ಆಗ್ರಹಿಸಿದರು.
