ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಗೌರಿ ಲಂಕೇಶ್​​ ಹಂತಕರ ಬೆನ್ನತ್ತಿದ ಎಸ್​ಐಟಿಗೆ ಒಂದು ದೂರು ಬಂದಿದ್ದು, ರಾಜ್ಯದ ಪ್ರಭಾವಿ ಶ್ರೀಗಳ ವಿರುದ್ಧ ಆರೋಪವನ್ನು ಮಾಡಲಾಗಿದೆ. ಗೌರಿ ಲಂಕೇಶ್​​ ಹತ್ಯೆ ಪ್ರಕರಣದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿಯಿಂದ ಎಸ್ಐಟಿಗೆ ಲಿಖಿತ ದೂರು ನೀಡಿದ್ದಾರೆ.

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಗೌರಿ ಲಂಕೇಶ್​​ ಹಂತಕರ ಬೆನ್ನತ್ತಿದ ಎಸ್​ಐಟಿಗೆ ಒಂದು ದೂರು ಬಂದಿದ್ದು, ರಾಜ್ಯದ ಪ್ರಭಾವಿ ಶ್ರೀಗಳ ವಿರುದ್ಧ ಆರೋಪವನ್ನು ಮಾಡಲಾಗಿದೆ.

ಗೌರಿ ಲಂಕೇಶ್​​ ಹತ್ಯೆ ಪ್ರಕರಣದಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿಯಿಂದ ಎಸ್ಐಟಿಗೆ ಲಿಖಿತ ದೂರು ನೀಡಿದ್ದಾರೆ.

ರಾಘವೇಶ್ವರ ಶ್ರೀಗಳ ವಿರುದ್ಧ ಅನುಮಾನ ವ್ಯಕ್ತಪಡಿಸಿದ ದಂಪತಿ, ರಾಘವೇಶ್ವರ ಶ್ರೀ ವಿರುದ್ದ 500 ಪುಟಕ್ಕೂ ಹೆಚ್ಚು ದಾಖಲೆ ನೀಡಿದ್ದಾರೆ.

ಗೌರಿ ಲಂಕೇಶ್​ ರಾಘವೇಶ್ವರ ಶ್ರೀ ವಿರುದ್ಧ ಲೇಖನ ಬರೆದಿದ್ದರು. ಇದರಿಂದ ಶ್ರೀಗಳೇ ಸುಪಾರಿ ಕೊಟ್ಟಿರುವ ಶಂಕೆ ವ್ಯಕ್ತಪಡಿಸಿ, ಗೌರಿ ಲಂಕೇಶ್​ ಹತ್ಯೆ ನಡೆದ ಮೂರನೇ ದಿನವೇ ಪ್ರೇಮಲತಾ ದಿವಾಕರ್ ಶಾಸ್ತ್ರಿ ದಂಪತಿ ದೂರು ನೀಡಿದ್ದಾರೆ.

ಪ್ರೇಮಲತಾ ದಿವಾಕರ್ ದಂಪತಿ ನೀಡಿದ ದಾಖಲೆಗಳನ್ನು SIT ಪರಿಶೀಲಿಸುತ್ತಿದೆ. 10 ದಿನದಲ್ಲಿ SIT ಅಧಿಕಾರಿಗಳ ನಂಬರ್​​ಗೆ ನೂರಾರು ಕರೆಗಳು ಬಂದಿವೆ. ರಾಘವೇಶ್ವರ ಶ್ರೀ ಮೇಲೆ ಶಂಕಿಸಿ SITಗೆ ನೂರಾರು ಕರೆ ಬಂದಿವೆ ಎಂದೆನ್ನಲಾಗಿದೆ. ಪರಿಶೀಲನೆ ವೇಳೆ ಪೂರಕ ಸಾಕ್ಷಿಗಳು ಸಿಕ್ಕಿಲ್ಲ ಎನ್ನುತ್ತಿದೆ ಎಸ್ಐಟಿ.