ಜಿಎಸ್ಟಿ ಬಳಿಕ ಸರಕುಗಳ ನೂತನ ದರಗಳನ್ನು ಮರುಮುದ್ರಿಸದಿದ್ದರೆ ತಯಾರಕರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುವುದೆಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಎಚ್ಚರಿಸಿದ್ದಾರೆ.

ನವದೆಹಲಿ (ಜು.07): ಜಿಎಸ್ಟಿ ಬಳಿಕ ಸರಕುಗಳ ನೂತನ ದರಗಳನ್ನು ಮರುಮುದ್ರಿಸದಿದ್ದರೆ ತಯಾರಕರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗುವುದೆಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಎಚ್ಚರಿಸಿದ್ದಾರೆ.

ವಿಕ್ರಯವಾಗದ ಸರಕುಗಳನ್ನು ನೂತನ ಎಂಆರ್’ಪಿ ದರಗಳೊಂದಿಗೆ ಮಾರಾಟಮಾಡಲು ತಯಾರಕರಿಗೆ ಸೆಪ್ಟೆಂಬರ್’ವರೆಗೆ ಸಮಯಾವಕಾಶ ನೀಡಲಾಗಿದೆ.

ಗ್ರಾಹಕರ ದೂರಗಳಿಗೆ ಸ್ಪಂದಿಸಲು ಒಂದು ಸಮಿತಿಯನ್ನು ರಚಿಸಲಾಗಿದ್ದು, 14ರಷ್ಟಿದ್ದ ಸಹಾಯವಾಣಿಗಳನ್ನು 60ಕ್ಕೇರಿಸಲಾಗಿದೆ. ಈ ವರೆಗೆ ಸುಮಾರು 700 ದೂರುಗಳು ಬಂದಿದ್ದು, ಅವುಗಳನ್ನು ಪರಿಹರಿಸಲು ಹಣಕಾಸು ಇಲಾಖೆಯ ನೆರವನ್ನು ಕೋರಲಾಗಿದೆ.

ಜಿಎಸ್ಟಿಯ ಆರಂಭಿಕ ಹಂತದಲ್ಲಿ ಕೆಲವು ತೊಂದರೆಗಳಿವೆ, ಅವುಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು. ಗ್ರಾಹಕರ ಹಾಗೂ ವರ್ತಕರ ದೂರುಗಳಿಗೆ ಸ್ಪಂದಿಸಲು ಗ್ರಾಹಕ ವ್ಯವಹಾರ ಇಲಾಖೆ ಹಾಗೂ ಹಣಕಾಸು ಇಲಾಖೆ ಸನ್ನದ್ಧವಾಗಿದೆಯೆಂದು ಪಾಸ್ವಾನ್ ಹೇಳಿದ್ದಾರೆ.