ಮುಂಬೈ ರೈಲು ನಿಲ್ದಾಣದಲ್ಲಿ ಯುವತಿ ಮೇಲೆ ದೌರ್ಜನ್ಯ! ಯುವತಿ ಮೇಲೆ ಗುಟ್ಕಾ ತಿಂದು ಉಗಿದ ದುರುಳರು! ಉದ್ದೇಶಪೂರ್ವಕವಾಗಿ ಗುಟ್ಕಾ ತಿಂದು ಉಗಿದ ಅಯೋಗ್ಯರು! ರೈಲಿಗಾಗಿ ಕಾಯುತ್ತಾ ನಿಂತಿದ್ದ ಯುವತಿ ಮೇಲೆ ದೌರ್ಜನ್ಯ

ಮುಂಬೈ(ಆ.25): ದೇಶ ಎಷ್ಟೇ ಮುಂದುವರೆದರೂ, ಮಹಿಳೆಯರಿಗೆ ಸೂಕ್ತ ಗೌರವ ಕೊಡುವ ವಿಷಯದಲ್ಲಿ ಬಹಳ ಹಿಂದಿದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.

ಪ್ಲಾಟ್‌ಫಾರ್ಮ್‌ನಲ್ಲಿ ನಿಂತು ರೈಲಿಗಾಗಿ ಕಾಯುತ್ತಿದ್ದ ಯುವತಿ ಮೇಲೆ ದುರುಳ ಪ್ರಯಾಣಿಕರು ಗುಟ್ಕಾ ಉಗಿದಿರುವ ಅಸಹ್ಯಕರ ಘಟನೆ ನಡೆದಿದೆ. ಮುಂಬೈನ ಬೋರಿವಲಿ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಯುವತಿ ಮೇಲೆ ದುರುಳರ ಗುಂಪೊಂದು ಗುಟ್ಕಾ ಉಗಿದು ದೌರ್ಜನ್ಯ ನಡೆಸಿದೆ.

Scroll to load tweet…

ಸಂಜನಾ ರಾವ್ ಎಂಬ ಯುವತಿ ತನ್ನ ಸ್ನೇಹಿತೆಯೊಂದಿಗೆ ಬೋರಿವಲಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ, ಇದೇ ಮಾರ್ಗವಾಗಿ ಚಲಿಸುತ್ತಿದ್ದ ರೈಲಿನಲ್ಲಿ ಕೆಲವು ಪುಂಡರು ಗುಟಕಾ ಜಗಿಯುತ್ತಾ ಉದ್ದೇಶಪೂರ್ವಕವಾಗಿ ಆಕೆ ಮೇಲೆ ಉಗಿದಿದ್ದಾರೆ. 

ಸದ್ಯ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ರೆಲ್ವೇ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.