ನೋಟ್ ಬ್ಯಾನ್ ವಿರೋಧಿಸಿ ಕಾಂಗ್ರಸ್ ಪಕ್ಷ ದೇಶಾದ್ಯಂತ ಎಂದು ಆಕ್ರೋಶ್ ದಿವಸ್ ಆಚರಿಸುವಂತೆ ಕರೆ ನೀಡಿದೆ. ಇದರ ಅಂಗವಾಗಿ ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ. ಆದರೆ ಈ ಪ್ರತಿಭಟನೆಗೆ ಜನ ಬೆಂಬಲ ಸಿಗದಿರುವುದರಿಂದ ಗದಗ ಬೆಟಗೇರಿ ಅವಳಿ ನಗರದಲ್ಲಿ ಇಲ್ಲಿನ ಕಾಂಗ್ರೆಸ್ ಸದಸ್ಯರು ತಮ್ಮ ವಾರ್ಡ್'ನವರಿಗೆ ಮನೆ ಕೊಡುತ್ತೇವೆಂಬ ಆಮಿಷವೊಡ್ಡಿ ಪ್ರತಿಭಟನೆಗೆ ಕರೆ ತಂದಿದ್ದಾರೆ ಎಂಬುವುದು ಸುವರ್ಣ ನ್ಯೂಸ್ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.

ಬೆಂಗಳೂರು(ನ.28): ನೋಟ್ ಬ್ಯಾನ್ ವಿರೋಧಿಸಿ ಕಾಂಗ್ರಸ್ ಪಕ್ಷ ದೇಶಾದ್ಯಂತ ಎಂದು ಆಕ್ರೋಶ್ ದಿವಸ್ ಆಚರಿಸುವಂತೆ ಕರೆ ನೀಡಿದೆ. ಇದರ ಅಂಗವಾಗಿ ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ. ಆದರೆ ಈ ಪ್ರತಿಭಟನೆಗೆ ಜನ ಬೆಂಬಲ ಸಿಗದಿರುವುದರಿಂದ ಗದಗ ಬೆಟಗೇರಿ ಅವಳಿ ನಗರದಲ್ಲಿ ಇಲ್ಲಿನ ಕಾಂಗ್ರೆಸ್ ಸದಸ್ಯರು ತಮ್ಮ ವಾರ್ಡ್'ನವರಿಗೆ ಮನೆ ಕೊಡುತ್ತೇವೆಂಬ ಆಮಿಷವೊಡ್ಡಿ ಪ್ರತಿಭಟನೆಗೆ ಕರೆ ತಂದಿದ್ದಾರೆ ಎಂಬುವುದು ಸುವರ್ಣ ನ್ಯೂಸ್ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲವರಿಗೆ ತಾವ್ಯಾಕೆ ಪ್ರತಿಭಟನೆಗೆ ಬಂದಿದ್ದೇವೆ ಎಂಬ ವಿಚಾರವೇ ಗೊತ್ತಿರಲಿಲ್ಲವಾದರೆ, ಇನ್ನು ಕೆಲವರಿಗೆ 'ನಿಮಗೆ ಮನೆ ನೀಡುತ್ತೇವೆ' ಆಮಿಷವೊಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರೆ ತಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಬಳ್ಳಾರಿಯಲ್ಲೂ ಇಂತಹುದೇ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದ ಬಸವನ ಕುಂಟೆ ಮತ್ತು ಕೌಲ್ ಬಜಾರ್ ಪ್ರದೇಶ ಸೇರಿದಂತೆ ವಿವಿಧ ಸ್ಲಂಗಳಿಂದ ನೂರಾರು ಮಹಿಳೆಯರನ್ನು ಕಾಂಗ್ರೆಸ್ ಕಾರ್ಯಕರ್ತರು ಹಣ ನೀಡಿ ಪ್ರತಿಭಟನೆ ಕರೆ ತಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇಲ್ಲೂ ತಾವ್ಯಾಕೆ ಬಂದಿದ್ದೇವೆಂದು ಜನರಿಗೆ ತಿಳಿದಿರಲಿಲ್ಲ.