ಬಿಬಿಎಂಪಿ ಹಗರಣ, ಶೋಭಾ ಕರಂದ್ಲಾಜೆ ಇಂಧನ ಸಚಿವರಾಗಿದ್ದಾಗ ನಡೆದ ಹಗರಣ, ಎಸ್.ಆರ್. ವಿಶ್ವನಾಥ್, ನಂದೀಶ್ ರೆಡ್ಡಿ ಹಾಗೂ ಬಿಎಸ್'ವೈ ಭೂಹಗರಣಗಳ ಬಗ್ಗೆ ಹೋರಾಟ ನಡೆಸಲಿದ್ದು, ಕಾರ್ಯಕರ್ತರ ತಂಡ ಕಾಂಗ್ರೆಸ್'ಗೆ ನೆರವು ನೀಡಲಿದೆ.

ಬೆಂಗಳೂರು(ಆ.17): ಬಿಜೆಪಿ ಹಮ್ಮಿಕೊಳ್ಳುವ ರಾಜ್ಯಾದ್ಯಂತ ಪ್ರತಿಭಟನೆಗೆ ಪ್ರತ್ಯುತ್ತರವಾಗಿ ರಾಜ್ಯ ಕಾಂಗ್ರೆಸ್ ತಿರುಗೇಟು ನೀಡಲು ಹೊಸ ಅಸ್ತ್ರ ಬಳಸಲು ತಯಾರಾಗಿದೆ.

ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಬಿಬಿಎಂಪಿ ಆಳ್ವಿಕೆಯಲ್ಲಾದ ಹಗರಣಗಳನ್ನು ಬೇಧಿಸಲು ರಾಜ್ಯಸರ್ಕಾರ ಹೊಸ ತಂಡ ರಚಿಸಿದೆ. ಹೈಕಮಾಂಡ್ ಸೂಚನೆ ಮೇರೆಗೆ ನೂತನ ತಂಡದ ಜವಾಬ್ದಾರಿಯನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಾಗಿದೆ. ಈ ತಂಡದಲ್ಲಿ ಸಾಮಾಜಿಕ ಹಾಗೂ ಆರ್'ಟಿಐ ಕಾರ್ಯಕರ್ತರು ಇರಲಿದ್ದಾರೆ.

ಬಿಬಿಎಂಪಿ ಹಗರಣ, ಶೋಭಾ ಕರಂದ್ಲಾಜೆ ಇಂಧನ ಸಚಿವರಾಗಿದ್ದಾಗ ನಡೆದ ಹಗರಣ, ಎಸ್.ಆರ್. ವಿಶ್ವನಾಥ್, ನಂದೀಶ್ ರೆಡ್ಡಿ ಹಾಗೂ ಬಿಎಸ್'ವೈ ಭೂಹಗರಣಗಳ ಬಗ್ಗೆ ಹೋರಾಟ ನಡೆಸಲಿದ್ದು, ಕಾರ್ಯಕರ್ತರ ತಂಡ ಕಾಂಗ್ರೆಸ್'ಗೆ ನೆರವು ನೀಡಲಿದೆ.

ರಾಜ್ಯ ಬಿಜೆಪಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಐಟಿ ದಾಳಿಯ ಹಿನ್ನಲೆಯಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸಿ ನಾಳೆ ಬಿಎಸ್'ವೈ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆಗೆ ಮುಂದಾಗಿದೆ.

(ಸಾಂದರ್ಭಿಕ ಚಿತ್ರ)