ನವದೆಹಲಿ (ಸೆ.18): ಆಪ್ ಸರ್ಕಾರ, ಸುಪ್ರೀಂಕೋರ್ಟ್ ನಿರ್ದೇಶನ ಉಲ್ಲಂಘಿಸಿ ಜಾಹೀರಾತಿಗೆ ಬೊಕ್ಕಸದ ಹಣ ದುರ್ಬಳಕ್ಕೆ ಮಾಡಿಕೊಂಡಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೇಮಿಸಿರುವ ಸಮಿತಿ ದೋಷಾರೋಪ ಮಾಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವೇ ತುಂಬಿಕೊಡಬೇಕು. ಜತೆಗೆ ಜಾಹೀರಾತಿಗೆ ಮಾಡಿರುವ ವೆಚ್ಚವನ್ನು ದೆಹಲಿ ಸರ್ಕಾರವೇ ಅಂದಾಜಿಸಬೇಕು ಎಂದು ಮಾಜಿ ಮುಖ್ಯ ಚುನಾವಣಾಧಿಕಾರಿ ಬಿಬಿ ಟಂಡನ್ ಅವರನ್ನು ಒಳಗೊಂಡ ಮೂವರ ಸದಸ್ಯರ ಸಮಿತಿ ಸೂಚಿಸಿದೆ.

ಈ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಾರ್ಗದರ್ಶನದ 9 ಅಂಶಗಳ ಪೈಕಿ 6 ಅಂಶಗಳನ್ನು ದೆಹಲಿ ಸರ್ಕಾರ ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ದೂರಿದ್ದರು ಎಂದು ಸಮಿತಿ ಹೇಳಿದೆ.