ಸೈನಿಕರು ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ಹೇಳಿಕೊಳ್ಳುವ ಬದಲು ಆಂತರಿಕವಾಗಿ ಬಗೆಹರಿಸಿಕೊಳ್ಳಬಹುದು ಅಥವಾ ನೇರವಾಗಿ ನಮ್ಮ ಬಳಿ ಹೇಳಿಕೊಳ್ಳಬಹುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ನವದೆಹಲಿ (ಜ.13): ಸೈನಿಕರು ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳನ್ನು ಹೇಳಿಕೊಳ್ಳುವ ಬದಲು ಆಂತರಿಕವಾಗಿ ಬಗೆಹರಿಸಿಕೊಳ್ಳಬಹುದು ಅಥವಾ ನೇರವಾಗಿ ನಮ್ಮ ಬಳಿ ಹೇಳಿಕೊಳ್ಳಬಹುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಯೋಧರಿಗೆ ಏನೇ ದೂರುಗಳಿದ್ದರೂ ಅದನ್ನು ಬಗೆಹರಿಸುವ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ. ರ್ಯಾಂಕ್ ಮತ್ತು ಸೇ ಲೆಕ್ಕಿಸದೇ ನನ್ನ ಬಳಿ ನೇರವಾಗಿ ಬರಬಹುದು. ಸಾಮಾಜಿಕ ಮಾಧ್ಯಮಗಳಿಗಿಂತ ನಮ್ಮ ಬಳಿ ನೇರವಾಗಿ ಬರುವುದನ್ನು ನಾವು ಬಯಸುತ್ತೇವೆ. ದೂರು ನೀಡಿದ ಸೈನಿಕರ ಗುರುತನ್ನು ಬಹಿರಂಗಪಡಿಸುವುದಿಲ್ಲ ಎಂದು ಬಿಪಿನ್ ರಾವತ್ ಭರವಸೆ ನೀಡಿದರು.
ಸೇನಾ ಪಡೆಗಳಿಗೆ ಕಳಪೆ ಆಹಾರ ಪೂರೈಸುವ ಬಗ್ಗೆ ಬಿಎಸ್ ಎಫ್ ಯೋಧನೊಬ್ಬ ಸಾಮಾಜಿಕ ಮಾಧ್ಯಗಳಲ್ಲಿ ಧ್ವನಿ ಎತ್ತಿರುವುದನ್ನು ಉಲ್ಲೇಖಿಸಿದ್ದಾರೆ.
