Asianet Suvarna News Asianet Suvarna News

ದೋಸ್ತಿ ಸರ್ಕಾರದಲ್ಲಿ ಮತ್ತೆ ಶುರುವಾಯ್ತು ಮುಸುಕಿನ ಗುದ್ದಾಟ..!

ದೋಸ್ತಿ ಸರ್ಕಾರದಲ್ಲಿ  ಮತ್ತೆ ಶುರುವಾಯ್ತು ಜಟಾಪಟಿ....! ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಹಾಗಾದ್ರೆ ಏನಿದು ತಿಕ್ಕಾಟ? ಇಲ್ಲಿದೆ ವಿವರ.

Cold war between HD kumaraswamy and DK Shivakumar for KPSC President
Author
Bengaluru, First Published Oct 28, 2018, 11:05 AM IST

ಬೆಂಗಳೂರು, [ಅ.28]:  ಕೆಪಿಎಸ್ ಸಿ ಅಧ್ಯಕ್ಷ ಪಟ್ಟಕ್ಕಾಗಿ ಮತ್ತೆ ದೋಸ್ತಿ ಸರ್ಕಾರದಲ್ಲಿ ಜಟಾಪಟಿ ಶುರುವಾಗಿದೆ.

ಕೆಪಿಎಸ್ ಸಿ ಅಧ್ಯಕ್ಷ ಪಟ್ಟಕ್ಕಾಗಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿದ್ದು, ತಮ್ಮ ಬಳಗದವರನ್ನು ಅಧ್ಯಕ್ಷ ಮಾಡಬೇಕು ಎಂದು ಇಬ್ಬರ ನಡುವೆ ಶೀತಲ ಸಮರ ನಡೆದಿದೆ.

ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ ಭಟ್  ಅವರ ಅವಧಿ ಡಿಸೆಂಬರ್ ನಲ್ಲಿ ಮುಕ್ತಾವಾಗಲಿದ್ದು, ನೂತನ ಅಧ್ಯಕ್ಷರ ನೇಮಕಕ್ಕಾಗಿ ಎಚ್ಡಿಕೆ-ಡಿಕೆಶಿ ನಡುವೆ ಪೈಪೋಟಿ ನಡೆದಿದೆ.

ಒಕ್ಕಲಿಗ ಅಭ್ಯರ್ಥಿ ರಘುನಂದನ್ ರಾಮಣ್ಣ  ಅವರ ನೇಮಕಕ್ಕಾಗಿ ಡಿ.ಕೆ.ಶಿವಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಮತ್ತೊಂದೆಡೆ ಕರೀಗೌಡ ಪರ ಎಚ್ಡಿಕೆ ಬ್ಯಾಟಿಂಗ್ ಮಾಡುತ್ತಿದ್ದಾರೆ. 

ಒಟ್ಟಿನಲ್ಲಿ ಎಚ್ಡಿಕೆ-ಡಿಕೆಶಿ ಒಪ್ಪಂದ ಮಾಡಿಕೊಂಡ್ರೆ ಈ ಬಾರಿ ಒಕ್ಕಲಿಗರಿಗೆ ಕೆಪಿಎಸ್ಸಿ ಅಧ್ಯಕ್ಷಗಿರಿ ಬಹುತೇಕ ಖಚಿತವಾಗಲಿದೆ.

Follow Us:
Download App:
  • android
  • ios