ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ವಿಜ್ಞಾನಿಗಳು ಇನ್ನೂ ಯಾವುದೇ ಅಂತಿಮ ತೀರ್ಪು ಕೊಟ್ಟಿಲ್ಲ.

ಲಾಸ್‌ಏಂಜಲೀಸ್‌: ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ವಿಜ್ಞಾನಿಗಳು ಇನ್ನೂ ಯಾವುದೇ ಅಂತಿಮ ತೀರ್ಪು ಕೊಟ್ಟಿಲ್ಲ.

ಆದರೆ, ಕ್ಯಾಲಿಫೋರ್ನಿಯಾದ ನ್ಯಾಯಾಧೀಶರೊಬ್ಬರು, ಕಾಫಿ ಮಾರಾಟಗಾರರು ಕ್ಯಾನ್ಸರ್‌ ಎಚ್ಚರಿಕೆಯನ್ನು ಪ್ರಕಟಿಸಬೇಕು ಎಂಬ ತೀರ್ಪು ನೀಡಿದ್ದಾರೆ. ಕಾಫಿ ಸಂಸ್ಕರಣಾ ಪ್ರಕ್ರಿಯೆಯಲ್ಲಿ ಸೃಷ್ಟಿಯಾಗುವ ಕಾರ್ಸಿನೋಜೆನ್‌ ಎಂಬ ರಾಸಾಯನಿಕ ಈಗ ಅಪರಾಧಿ ಸ್ಥಾನದಲ್ಲಿದೆ. ಒಂದು ಪುಟ್ಟಎನ್‌ಜಿಒ ಮತ್ತು ಬಹುದೊಡ್ಡ ಕಾಫಿ ಮಾರುಕಟ್ಟೆ ನಡುವಿನ ಎಂಟು ವರ್ಷಗಳ ಕಾನೂನು ಸಮರದ ಬಳಿಕ ಕೋರ್ಟ್‌ ಈ ತೀರ್ಪು ನೀಡಿದೆ.

ಕಾಫಿಯಲ್ಲಿರುವ ವಿಷಕಾರಿ ಅಂಶ ತೆಗೆಯಬೇಕು ಅಥವಾ ಎಚ್ಚರಿಕೆ ಪ್ರಕಟನೆ ಪ್ರಕಟಿಸ ಬೇಕೆಂಬುದು ವಿಷಕಾರಿ ಅಂಶಗಳ ಕುರಿತ ಶಿಕ್ಷಣ ಮತ್ತು ಸಂಶೋಧನಾ ಮಂಡಳಿಯದ ಮನವಿಯಾಗಿತ್ತು. ಕಾಫಿಯಲ್ಲಿರುವ ರಾಸಾಯನಿಕ ಅಪಾಯಕಾರಿಯಲ್ಲ ಎಂದು ಸ್ಟಾರ್‌ಬಕ್ಸ್‌ ಕಾಪ್‌ರ್‍ ನೇತೃತ್ವದ ಉದ್ಯಮ ಸಂಸ್ಥೆಗಳು ಪ್ರತಿಪಾದಿಸಿದ್ದವು.

ತಮ್ಮ ವಾದವನ್ನು ಬೆಂಬಲಿಸುವಂತಹ ಸೂಕ್ತ ಆಧಾರಗಳನ್ನು ಕಾಫಿ ಉತ್ಪಾದಕರು ಹಾಜರು ಪಡಿಸಿಲ್ಲ ಎಂದು ತಿಳಿಸಿರುವ ಲಾಸ್‌ಏಂಜಲೀಸ್‌ ಸುಪೀರಿಯರ್‌ ಕೋರ್ಟ್‌ ಜಡ್ಜ್‌ ಎಲಿಹು ಬೆರ್ಲೆ, ಈ ತೀರ್ಪು ನೀಡಿದ್ದಾರೆ.