ಚುನಾವಣಾ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ  ಬೆನ್ನಲ್ಲೇ   ಉಲ್ಲಂಘನೆ ಆರೋಪ  ಕೇಳಿ ಬಂದಿದೆ.  ರಾಜ್ಯದ್ಲಲಿಯೇ ಮೊದಲ ಪ್ರಕರಣ ದಾಖಲಾಗಿದೆ. 

ಬೆಂಗಳೂರು (ಮಾ. 27): ಚುನಾವಣಾ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಉಲ್ಲಂಘನೆ ಆರೋಪ ಕೇಳಿ ಬಂದಿದೆ. ರಾಜ್ಯದಲ್ಲಿಯೇ ಮೊದಲ ಪ್ರಕರಣ ದಾಖಲಾಗಿದೆ. 

ಮುಖ್ಯಮಂತ್ರಿ ಆಗಮನಕ್ಕಾಗಿ ತಯಾರಿಸಿದ್ದ ಅಪಾರ ಪ್ರಮಾಣದ ಬಾಡೂಟವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು 500 ಕೆಜಿ ಕುರಿ ಮಾಂಸ, 500 ಕೆಜಿ ಕೋಳಿ ಮಾಂಸ ಸೇರಿ ಒಟ್ಟು ಒಂದು ಟನ್ ಮಾಂಸ ಜೊತೆಗೆ ಇತರೆ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. 

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್ ಇಂದು ಮುಖ್ಯಮಂತ್ರಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಬೇಕಿತ್ತು. ನೀತಿ ಸಂಹಿತೆ ಕಾರಣದಿಂದಾಗಿ ಅಧಿಕೃತವಾಗಿ ಕಾಂಗ್ರೆಸ್ ಸೇರಲೂ ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ತಾಲೂಕಿನ ಕಣಜೇನಹಳ್ಳಿಯಲ್ಲಿ ಬಾಡೂಟ ತಯಾರಿಸಲಾಗಿತ್ತು.