ಈ ಸೋಶಿಯಲ್ ಮೀಡಿಯಾದಲ್ಲಿ ಅದು ಯಾವ್ಯಾವ ಚಾಲೆಂಜ್ ಗಳು ಹುಟ್ಟಿಕೊಳ್ಳುತ್ತವೋ ಹೇಳಲು ಸಾಧವೇ ಇಲ್ಲ. ಇಲ್ಲಿಯೂ ಅಂಥದ್ದೊಂದು ವಿಚಿತ್ರ ಸವಾಲು ಕಾರಣವಿಲ್ಲದ ಕಾರಣಕ್ಕೆ ಮಕ್ಕಳಾದಿಯಾಗಿ ಹಲವರನ್ನು ಸೆಳೆಯುತ್ತಿದೆ.
ನವದೆಹಲಿ(ಮಾ. 08) ಸೋಶಿಯಲ್ ಮೀಡಿಯಾದಲ್ಲಿ ಹೊಸ ಚಾಲೆಂಜ್ ಹುಟ್ಟಿಕೊಂಡಿದೆ. ಹೆಣ್ಣು ಮಕ್ಕಳು ಹೆದರುವ ಜೀರಳೆ ಚಾಲೆಂಜ್ ಇದು!
ಫೇಸ್ ಬುಕ್ ನಲ್ಲಿ ಅಲೆಕ್ಸ್ ಅಂಗ್ ಎಂಬಾತ ಶುರುಮಾಡಿದ ಜೀರಳೆ ಚಾಲೆಂಜ್ ಇದೀಗ ಫುಲ್ ಫೇಮಸ್ಸಾಗುತ್ತಿದೆ. ಮುಖದ ಮೇಲೆ ಜೀರಳೆ ಬಿಟ್ಟುಕೊಂಡು ಅದರ ಸೆಲ್ಫಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಚಾಲೆಂಜ್ ನ ಸಾರಾಂಶ.
ಕುದುರೆ ಏರಿ ಎಕ್ಸಾಂಗೆ ಬಂದ ವಿದ್ಯಾರ್ಥಿನಿ, ವಿಡಿಯೋ ವೈರಲ್
ಏಪ್ರಿಲ್ ೨೦ ರಂದು ಇದನ್ನು ಪೋಸ್ಟ್ ಮಾಡಿದ್ದ ಅಂಗ್ ನಿಮ್ಮ ಬಳಿ ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದ. ಇದಾದ ಮೇಲೆ ಯುವತಿಯರ ಆದಿಯಾಗಿ ಹಲವರು ಫಾಲೋ ಮಾಡಿದ್ದು ಮುಖದ ಮೇಲೆ ಜೀರಳೆ ಬಿಟ್ಟುಕೊಂಡಿರುವ ಸೆಲ್ಫಿ ಅಪ್ ಲೋಡ್ ಮಾಡಿದ್ದಾರೆ.
