ಆಗ್ರಾ(ಸೆ.12): ಬದ್ಧ ವೈರಿಗಳೆಂದೇ ಗುರುತಿಸಿಕೊಂಡಿರುವ ಹಾವು-ಮುಂಗುಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಬರ್ದಸ್ತ್ ಫೈಟ್ ನಡೆಸಿವೆ. ಸುಮಾರು 30 ನಿಮಿಷಕ್ಕೂ ಅಧಿಕ ಕಾಲ ಕಾದಾಟ ನಡೆಸಿರುವ ವಿಡಿಯೋ ಸ್ಥಳೀಯರ ಮೊಬೈಲ್'ನಲ್ಲಿ ಸೆರೆಯಾಗಿದೆ.
ಆಗ್ರಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ನಡು ರೋಡಿನಲ್ಲಿ ಎದುರಾದ ಹಾವು-ಮುಂಗುಸಿ ಕಾದಾಟದ ದೃಶ್ಯ ಮೊಬೈಲ್'ನಲ್ಲಿ ಸೆರೆಯಾಗಿದೆ. ಎರಡೂ ಜೀವನ್ಮರಣದ ಹೋರಾಟ ನಡೆಸಿದ್ದು, ಮುಂಗುಸಿ ಹಾವಿನ ಮೇಲೆ ಹಲವಾರು ಸಲ ದಾಳಿ ನಡೆಸಿದೆ.
ಇಂತಹದೊಂದು ಅಪರೂಪದ ಹಾಗೂ ರೋಮಾಂಚನಕಾರಿ ದೃಶ್ಯ ಸಾರ್ವಜನಿಕರು ನೋಡಿ ಕಣ್ತುಬಿಕೊಂಡಿದ್ದು, ಕೊನೆಗೆ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
