ಲಖನೌ: ಗೋಸಾಗಣೆ ಮಾಡುವವರ ಮೇಲೆ ಗೋ ರಕ್ಷಣೆ ಹೆಸರಿನಲ್ಲಿ ನಡೆಯುವ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದೆ.

ಗೋ ರಕ್ಷಕರ ಹಾವಳಿ ಹಾಗೂ ದಾಂಧಲೆಗಳನ್ನು ತಡೆಯಲು ಗೋವು ಸಾಗಣೆ ಮಾಡುವವರಿಗೆ ಪ್ರಮಾಣ ಪತ್ರ ವಿತರಿಸಲು ಗೋವು ಸೇವಾ ಆಯೋಗಕ್ಕೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ಸೂಚಿಸಿದ್ದಾರೆ. ಅಲ್ಲದೆ, ಇಂಥ ಪ್ರಮಾಣಪತ್ರ ಹೊಂದಿರುವ ಗೋ ಸಾಗಣೆದಾರರಿಗೆ ಭದ್ರತೆ ಒದಗಿಸುವುದು ಪೊಲೀಸರ ಜವಾಬ್ದಾರಿಯಾಗಿರಲಿದೆ ಎಂದು ತಿಳಿಸಿದ್ದಾರೆ.

ಚಿತ್ರಗೀತೆಗೆ ನಿಷೇಧ - ಭಜನೆಗೆ ಅವಕಾಶ : ಸಿಎಂ ಯೋಗಿ ಆದೇಶ

ಗೋವು ಸೇವಾ ಆಯೋಗದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಯೋಗಿ, ಗೋವುಗಳ ಅಕ್ರಮ ಸಾಗಣೆ ತಡೆಗೆ ಕ್ರಮ ಹಾಗೂ ಗೋವುಗಳ ಆಶ್ರಯ ತಾಣಗಳನ್ನು ನಿಯಮಿತವಾಗಿ ಪರಿಶೀಲನೆಗೊಳಪಡಿಸಬೇಕು ಎಂದಿದ್ದಾರೆ.