ಮುಖ್ಯಮಂತ್ರಿಯವರಿಗಾಗಿಯೇ ಚಿತ್ರತಂಡ ಸ್ಟುಡಿಯೋದಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು. ಸಿಎಂ ಅವರೊಂದಿಗೆ ಗೃಹ ಸಚಿವ ಪರಮೇಶ್ವರ್,ಅವರ ಧರ್ಮ ಪತ್ನಿ ಹಾಗೂ ವಾರ್ತಾ ಸಚಿವ ರೋಷನ್ ಬೇಗ್ ಸಹ ಸಿನಿಮಾ ವೀಕ್ಷಿಸಿದರು.

ಬೆಂಗಳೂರು(ಮೇ.01): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ದಿನ 2 ಸಿನಿಮಾ ವೀಕ್ಷಿಸಿದ್ದಾರೆ. ತಮ್ಮ ಮೊಮ್ಮಗ ಆಸೆಪಟ್ಟ ಎಂಬ ಕಾರಣಕ್ಕಾಗಿ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಮತ್ತು ಕನ್ನಡ ಸಿನಿಮಾವೊಂದನ್ನು ವೀಕ್ಷಿಸಿದ್ದಾರೆ.

ಒರಾಯನ್ ಮಾಲ್'ನಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರು ಒಳಗೊಂಡ 48 ಮಂದಿಯ ಜೊತೆ ಬಾಹುಬಲಿ-2 ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ. ಕನ್ನಿಂಗ್ಹ್ಯಾಂರಸ್ತೆಯಲ್ಲಿರುವಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಆಪೂರ್ವ ಕಾಸರವಳ್ಳಿ ನಿರ್ದೇಶನದ 'ನಿರುತ್ತರ'ಸಿನಿಮಾ ನೋಡಿದ್ದಾರೆ.

ಮುಖ್ಯಮಂತ್ರಿಯವರಿಗಾಗಿಯೇ ಚಿತ್ರತಂಡ ಸ್ಟುಡಿಯೋದಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು. ಸಿಎಂ ಅವರೊಂದಿಗೆ ಗೃಹ ಸಚಿವ ಪರಮೇಶ್ವರ್,ಅವರ ಧರ್ಮ ಪತ್ನಿ ಹಾಗೂ ವಾರ್ತಾ ಸಚಿವ ರೋಷನ್ ಬೇಗ್ ಸಹ ಸಿನಿಮಾ ವೀಕ್ಷಿಸಿದರು. ಕೆಲವು ದಿನಗಳ ಹಿಂದಷ್ಟೆ ಪುನೀತ್ ರಾಜ್'ಕುಮಾರ್ ಅಭಿನಯದ 'ರಾಜಕುಮಾರ್' ಸಿನಿಮಾವನ್ನು ನೀಡಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡವನ್ನು ಅಭಿನಂದಿಸಿದ್ದರು.