ರಾಹುಲ್‌ಗೆ ಮಕ್ಕಳನ್ನು ಪರಿಚಯಿಸಿ ಟಿಕೆಟ್‌ ಕೇಳಿದ ಸಿದ್ದು, ಮಹದೇವಪ್ಪ

First Published 26, Mar 2018, 8:34 AM IST
CM Wants To Ticket For Son
Highlights

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ತಮ್ಮ ಪುತ್ರರನ್ನು ಪರಿಚಯ ಮಾಡಿಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರು, ಚುನಾವಣೆಗೆ ಸ್ಪರ್ಧಿಸಲು ಇಬ್ಬರಿಗೂ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಮೈಸೂರು: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ತಮ್ಮ ಪುತ್ರರನ್ನು ಪರಿಚಯ ಮಾಡಿಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅವರು, ಚುನಾವಣೆಗೆ ಸ್ಪರ್ಧಿಸಲು ಇಬ್ಬರಿಗೂ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಭಾನುವಾರ ಉಪಹಾರ ವೇಳೆ ರಾಹುಲ್‌ಗೆ ತಮ್ಮ ಮಕ್ಕಳಾದ ಡಾ.ಯತೀಂದ್ರ ಮತ್ತು ಸುನಿಲ್‌ ಬೋಸ್‌ ಅವರನ್ನು ಸಿದ್ದರಾಮಯ್ಯ ಮತ್ತು ಡಾ.ಎಚ್‌.ಸಿ. ಮಹದೇವಪ್ಪ ಪರಿಚಯಿಸಿದರು.

ವರುಣ ಕ್ಷೇತ್ರದಿಂದ ಡಾ.ಯತೀಂದ್ರ, ಟಿ.ನರಸೀಪುರ ಕ್ಷೇತ್ರದಿಂದ ಸುನಿಲ್‌ ಬೋಸ್‌ ಸ್ಪರ್ಧಿಸಲು ಅವಕಾಶ ನೀಡಿದಲ್ಲಿ ಇಬ್ಬರನ್ನೂ ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ವೇಳೆ ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್‌ ಮಾತ್ರ ಇದ್ದರು. ಇತರೆ ಯಾವುದೇ ನಾಯಕರಿಲ್ಲದಿದ್ದಾಗ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರು ರಾಹುಲ್‌ಗಾಂಧಿ ಬಳಿ ಮಕ್ಕಳ ಟಿಕೆಟ್‌ ಬಗ್ಗೆ ಪ್ರಸ್ತಾಪಿಸಿರುವುದು ಗಮನಾರ್ಹ.

loader