ಪಶ್ಚಿಮದ ದೇಶಗಳಲ್ಲಿ ಮತಯಂತ್ರ ಬಳಸಿದರೂ ಮತ್ತೆ ವಾಪಸ್‌ ಮತಪತ್ರ ಬಳಕೆ ಪ್ರಾರಂಭಿಸಿದ್ದಾರೆ. ಈಗ ಮತಯಂತ್ರ ತಿರುಚಿ ದ್ದಾರೋ, ಇಲ್ಲವೋ ಗೊತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಮತಯಂತ್ರ ತಿರುಚಲು ಹೋಗು ವುದಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು ಆ ಕೆಲಸ ಮಾಡಬಹುದು
ನವದೆಹಲಿ(ಏ.17): ಇತ್ತೀಚಿನ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭೆ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ ಗಳನ್ನು ತಿರುಚಲಾಗಿರಲಿಲ್ಲ ಎಂದು ಹೇಳಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ‘ವಿದ್ಯುನ್ಮಾನ ಮತಯಂತ್ರ ತಿರುಚಲು ಅವಕಾಶವಿದೆ' ಎಂದು ಹೇಳಿದ್ದಾರೆ.
ಭಾನುವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿ, ‘ವಿದ್ಯುನ್ಮಾನ ಮತಯಂತ್ರ ತಿರುಚುವ ಅವಕಾಶವಿದೆ. ಮತಯಂತ್ರ ಪಾರದರ್ಶಕ ವ್ಯವಸ್ಥೆಯಲ್ಲ. ಬ್ಯಾಲೆಟ್ ಪೇಪರ್ ಅತ್ಯಂತ ವಿಶ್ವಾಸಾರ್ಹವಾದದ್ದು. ಪಶ್ಚಿಮದ ದೇಶಗಳಲ್ಲಿ ಮತಯಂತ್ರ ಬಳಸಿದರೂ ಮತ್ತೆ ವಾಪಸ್ ಮತಪತ್ರ ಬಳಕೆ ಪ್ರಾರಂಭಿಸಿದ್ದಾರೆ. ಈಗ ಮತಯಂತ್ರ ತಿರುಚಿ ದ್ದಾರೋ, ಇಲ್ಲವೋ ಗೊತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಮತಯಂತ್ರ ತಿರುಚಲು ಹೋಗು ವುದಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರು ಆ ಕೆಲಸ ಮಾಡಬಹುದು' ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿಯ ತಂತ್ರಗಾರಿಕೆ ನಡೆಯುವುದಿಲ್ಲ. ಬಿಜೆಪಿ 2004ರಲ್ಲಿ ಹೆಚ್ಚು ಸೀಟು ಗೆಲ್ಲಲು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಆ ಪಕ್ಷ ಸೇರಿದ್ದು ಕಾರಣ. ಬಳಿಕ 2008ರಲ್ಲಿ ಕುಮಾರಸ್ವಾಮಿ ಅಧಿಕಾರ ನೀಡದೇ ಇದ್ದ ಕಾರಣಕ್ಕೆ ಬಿಜೆಪಿಗೆ ಹೆಚ್ಚು ಸೀಟುಗಳು ಬಂದವು. ಇದನ್ನು ಹೊರತುಪಡಿಸಿದರೆ ಅವರ ಹಿಂದುತ್ವದ ಅಜೆಂಡಾದಿಂದ ಕರ್ನಾಟಕದಲ್ಲಿ ಗೆದ್ದಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಆಡಳಿತ ವಿರೋಧಿ ಅಲೆ ಇಲ್ಲ. ನಮ್ಮ ಸರ್ಕಾರ ಆಡಳಿ ತಕ್ಕೆ ಬಂದ ಬಳಿಕ 9 ಕ್ಷೇತ್ರಗಳಿಗೆ ನಡೆದ ಉಪ ಚುನಾವ ಣೆಯಲ್ಲಿ 6 ಸ್ಥಾನಗಳನ್ನು ಗೆದ್ದುಕೊಂಡಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಬಹುಮತ ದೊಂದಿಗೆ ನಾವು ಅಧಿಕಾರಕ್ಕೆ ಮರಳಲಿದ್ದೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ‘ನಾನು ಅಹಿಂದ ಪರ ಎನ್ನಲು ಯಾವುದೇ ಹಿಂಜರಿಕೆ ಇಲ್ಲ. ಆದರೆ ನನ್ನ ಸರ್ಕಾರದ ಕಾರ್ಯಕ್ರಮಗಳು ಕೇವಲ ಅಹಿಂದ ವರ್ಗಕ್ಕೆ ಸೀಮಿತವಾಗಿಲ್ಲ. ಎಲ್ಲ ವರ್ಗದ ಜನರಿಗೂ ಸರ್ಕಾರ ಯೋಜನೆಗಳನ್ನು ನೀಡ ಲಾಗಿದೆ' ಎಂದರು.
ಕೃಷ್ಣ ದಾರ್ಶನಿಕ!
ಪಕ್ಷ ತೊರೆದಿರುವ ಎಸ್. ಎಂ. ಕೃಷ್ಣ ಅವರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅವರೊಬ್ಬ ದಾರ್ಶ ನಿಕ. ‘ನನ್ನ ಸರ್ಕಾರ ಅತ್ಯಂತ ಕೆಟ್ಟಸರ್ಕಾರ ಎಂದು ಹೇಳುವ ಕೃಷ್ಣ ಅವರ ಸಚಿವ ಸಂಪುಟದಲ್ಲಿದ್ದ 30 ಜನರು ಸಚಿವರು ಏಕೆ ಚುನಾವಣೆಯಲ್ಲಿ ಸೋತರು? ಅವರು ಮಾಡಿದ ಅಭಿವೃದ್ಧಿ ಚಟುವಟಿಕೆಯನ್ನು ಕಂಡು ಜನರು ಸೋಲಿಸಿದರೆ?' ಎಂದು ವ್ಯಂಗ್ಯವಾಗಿ ಹೇಳಿದರು.
ಶೀಘ್ರವೇ ಜಾತಿ ಗಣತಿ ವರದಿ ಬಹಿರಂಗ
ಜಾತಿ ಗಣತಿ ಸಮೀಕ್ಷೆ ವರದಿ ಕ್ರಮಬದ್ಧ ಮತ್ತು ಅಧಿಕೃತವಾಗಿರಬೇಕು. ವರದಿ ಸಿದ್ಧವಿದ್ದು ಬಿಡುಗಡೆ ಬಗ್ಗೆ ತಕ್ಷಣವೇ ಹಿಂದುಳಿದ ಆಯೋಗದ ಅಧ್ಯಕ್ಷರ ಜೊತೆ ಮಾತನಾಡುತ್ತೇನೆಂದರು.
