ಕೆಲವರು ನನ್ನನ್ನು ಟಕಿಸುತ್ತಾರೆ. ಸಮಾಜವಾದ ಮಾತಾಡ್ತಾರೆ, ಆದರ ಜಾತಿ ಸಭೆಗಳಿಗೆ ಹೋಗ್ತಾರೆ ಅಂತ. ಜಾತಿ ಜಾತಿಗಳ ನಡುವೆ ಸಮಾನತೆ ಬಾರದೇ ಜಾತಿ ವ್ಯವಸ್ಥೆ ಹೋಗಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಎಲ್ಲರೂ‌ ಮಾತಾಡ್ತಾರೆ.ಆದರೆ ಸಮಾಜಿಕ ನ್ಯಾಯದ ಪರವಾಗಿ ಯಾರಿದ್ದೇವೆ ಅಂತ ಗುರುತಿಸಿಕೊಳ್ಳಬೇಕು' ಎಂದು ಹೇಳಿದರು.

ಬೆಂಗಳೂರು(ಆ.27): ಇಂತಿಂಥ ಜಾತಿಯಲ್ಲಿ ‌ನಾವು ಹುಟ್ಟಬೇಕು ಅಂತ ಯಾರೂ ಅರ್ಜಿ ಹಾಕಿಕೊಂಡಿರಲ್ಲ. ಆಕಸ್ಮಿಕವಾಗಿ ‌ಈ‌ ಜಾತಿಯಲ್ಲಿ ಹುಟ್ಟಿದ್ದೇವೆ. ನಾನು ನೀವೆಲ್ಲ ಕುರುಬ ಸಮುದಾಯದಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡಿರಲಿಲ್ಲ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರದಿದ್ದ ಜನರನ್ನು ಪ್ರಶ್ನಿಸಿದ ಪ್ರಸಂಗ ನಡೆಯಿತು.

ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗಾಯಿತ್ರಿ ವಿಹಾರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆ ಅವಕಾಶ ಸಿಕ್ಕಾಗ ಅವಕಾಶ ವಂಚಿತರಿಗೆ ಅವಕಾಶ ಒದಗಿಸಬೇಕು. ನಾನು ಕುರುಬರ ಜಾತಿಯಲ್ಲಿ ಹುಟ್ಟಿದ್ದೇನೆ.ಆದರೆ ನಾನು ಎಲ್ಲ ಧರ್ಮ ಜಾತಿಯವರಿಗೆ ನಾನು ಮುಖ್ಯಮಂತ್ರಿ. ಹೀಗಾಗಿಯೇ ರಾಜ್ಯದ ಎಲ್ಲ ಆರೂವರೆ ಕೋಟಿ‌ ಜನರಿಗೆ ಸರ್ಕಾರದ ವತಿಯಿಂದ ಒಂದಲ್ಲ ಒಂದು ಕಾರ್ಯಕ್ರಮ ಕೊಟ್ಟಿದ್ದೇವೆ. ನನ್ನನ್ನು ಅಹಿಂದ ಸಿಎಂ ಅಂತ ಮೂದಲಿಸುತ್ತಾರೆ. ಅವರ ತಿಳುವಳಿಕೆ ತಪ್ಪು. ನಾನು ಅಹಿಂದ ಪರ ಅಂತ ಹೇಳಿಕೊಳ್ಳಲು ನನಗ್ಯಾವ ಮುಜಗರವೂ ಇಲ್ಲ. ಆದರೆ ನಾನು ಎಲ್ಲ ವರ್ಗಗಳ ಬಡವರ ಪರವಾಗಿದ್ದೇನೆ' ಎಂದು ತಿಳಿಸಿದರು.

ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಿದೆ

ಸಮಾಜದ ಆಗುಹೋಗುಗಳ ಬಗ್ಗೆ ತಿಳಿಯಲು ವಿದ್ಯೆ ಪ್ರತಿಯೊಬ್ಬರಿಗೂ ಬೇಕೇ ಬೇಕು.ಚಲನೆ ಇರುವ ಸಮಾಜದಲ್ಲಿ ಆರ್ಥಿಕ, ಸಮಾಜಿಕ ಬೆಳವಣಿಗೆ ಆಗುತ್ತದೆ. ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಿರುವುದರಿಂದಲೇ ಜಾತಿ ವ್ಯವಸ್ಥೆ ಹೋಗಲ್ಲ. ಕೆಲವರು ನನ್ನನ್ನು ಟಕಿಸುತ್ತಾರೆ. ಸಮಾಜವಾದ ಮಾತಾಡ್ತಾರೆ, ಆದರ ಜಾತಿ ಸಭೆಗಳಿಗೆ ಹೋಗ್ತಾರೆ ಅಂತ. ಜಾತಿ ಜಾತಿಗಳ ನಡುವೆ ಸಮಾನತೆ ಬಾರದೇ ಜಾತಿ ವ್ಯವಸ್ಥೆ ಹೋಗಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಎಲ್ಲರೂ‌ ಮಾತಾಡ್ತಾರೆ.ಆದರೆ ಸಮಾಜಿಕ ನ್ಯಾಯದ ಪರವಾಗಿ ಯಾರಿದ್ದೇವೆ ಅಂತ ಗುರುತಿಸಿಕೊಳ್ಳಬೇಕು' ಎಂದು ಹೇಳಿದರು.

ಅಮಿತ್ ಶಾ ರಾಜ್ಯಕ್ಕೆ ಬಂದಾಗ 'ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಮುಂದಾದರೆ ಕರ್ನಾಟಕ ರಾಜ್ಯ ಸರ್ಕಾರ ವಿರೋಧಿಸಿದೆ ಅಂತ ಹೇಳಿದ್ದರು. ನಾವು ವಿರೋಧಿಸಿದ್ದು ಅದಕ್ಕಲ್ಲ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಕ್ಕು ಕಿತ್ತುಕೊಳ್ಳಬೇಡಿ ಅಂತ ವಿರೋಧಿಸಿದ್ದು. ಈಗ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳಿಗೆ ಇರುವ ಮೀಸಲಾತಿ ವಿಂಗಡಣೆ ಮಾಡಲು ಹೊರಟಿದ್ದಾರೆ.ಅದೂ ಕೂಡ ಸಾಮಾಜಿಕ ನ್ಯಾಯ ಕ್ಕೆ ಮಾಡುವ ದ್ರೋಹ ಎಂದರು.

ಜಾತಿ ಗಣತಿ ಬಗ್ಗೆ ಸ್ಪಷ್ಟನೆ

ಜಾತಿ ಗಣತಿಯ ವರದಿ ಬಿಡುಗಡೆ ‌ಮಾಡುವಂತೆ ಚೀಟಿ ಕಳಿಸಿದ ಅಭಿಮಾನಿಯೊಬ್ಬನಿಗೆ ಉತ್ತರ ನೀಡಿದ ಸಿಎಂ,ಹೌದು ನೀನು ಹೇಳೋದು ಸರಿ ಇದೆ, ಬಿಡುಗಡೆ ಆಗಬೇಕು. ಆದರೆ ಮೀಸಲಾತಿ ಪ್ರಮಾಣ ಶೇಕಡಾ ಐವತ್ತಕ್ಕೆ ಏರಿಸಲು‌‌ ಸಾಧ್ಯವೇ? ಅಂತ ಪರಿಶೀಲಿಸಲು ಹೇಳಿದ್ದೇನೆ. ಆದ ಕಾರಣ ಜಾತಿಗಣತಿ ವರದಿ ಬಿಡುಗಡೆ ವಿಳಂಬ ಆಗಿದೆ' ಎಂದು ಸ್ಪಷ್ಟನೆ ನೀಡಿದರು.

ಸಮಾರಂಭದಲ್ಲಿ ಸಮುದಾಯದ ಹಲವು ಮುಖಂಡರು ಭಾಗಿಯಾಗಿದ್ದರು.