ನಾರಾಯಣಪೇಟೆ ಎಪಿಎಂಸಿಯಲ್ಲಿ ಶಾಸಕ ರಾಜಣ್ಣ ಮೂಟೆ ಹೊತ್ತು, ಕಸ ಗುಡಿಸಿದ್ದರೆ, ರಂಗಾರೆಡ್ಡಿ ಜಿಲ್ಲೆ ಶಹಬಾದ್​’ನಲ್ಲಿ ಎಂಎಲ್​’ಸಿ ನರೇಂದ್ರ ರೆಡ್ಡಿ ರಸ್ತೆ ಬದಿ ಕಸ ಗುಡಿಸಿ ಕೂಲಿ ಕೆಲಸ ಮಾಡಿದ್ದಾರೆ.

ಹೈದರಾಬಾದ್ (ಏ.15): ವಾರಂಗಲ್​’ನಲ್ಲಿ ನಡೆಯಲಿರುವ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್’ಎಸ್) ಪಕ್ಷದ ಸಂಸ್ಥಾಪನಾ ದಿನಾಚರಣೆಗೆ ಹಣ ಸಂಗ್ರಹಿಸಿಲು ಟಿಆರ್​ಎಸ್​ ನಾಯಕರು ಕೂಲಿ ಮಾಡುತ್ತಿದ್ದಾರೆ.

ಸ್ವತಃ ಸಿಎಂ ಚಂದ್ರಶೇಖರ್​ ರಾವ್​ ಕೂಡ ಕೂಲಿ ಮಾಡಿ ಪಕ್ಷಕ್ಕೆ ಹಣ ಸಂಗ್ರಹಿಸಲಿದ್ದಾರೆ. ಈ ಸಂಬಂಧ ನಿನ್ನೆ ಸಿಎಂ ಪುತ್ರ ಸಚಿವ ಕೆ.ಟಿ.ರಾಮರಾವ್​ ವಾರಂಗಲ್’ನ ಐಸ್​’ಕ್ರೀಂ ಮಳಿಗೆಯಲ್ಲಿ ಕೆಲಸ ಮಾಡಿದ್ದಾರೆ. ಅವರು ಮಾಡಿದ ಕೆಲಸಕ್ಕೆ ಸಿಕ್ಕ ಕೂಲಿ ಬರೋಬ್ಬರಿ 7.5 ಲಕ್ಷ ರೂ.ಗಳು.

ನಾರಾಯಣಪೇಟೆ ಎಪಿಎಂಸಿಯಲ್ಲಿ ಶಾಸಕ ರಾಜಣ್ಣ ಮೂಟೆ ಹೊತ್ತು, ಕಸ ಗುಡಿಸಿದ್ದರೆ, ರಂಗಾರೆಡ್ಡಿ ಜಿಲ್ಲೆ ಶಹಬಾದ್​’ನಲ್ಲಿ ಎಂಎಲ್​’ಸಿ ನರೇಂದ್ರ ರೆಡ್ಡಿ ರಸ್ತೆ ಬದಿ ಕಸ ಗುಡಿಸಿ ಕೂಲಿ ಕೆಲಸ ಮಾಡಿದ್ದಾರೆ.